Connect with us

Bengaluru City

ಅಮ್ಮ ಅಂತ ಕರೀತಿದ್ರಿ, ನಿಮ್ಮ ಹೆಸರು ಅಮರವಾಗಲಿ: ಲೀಲಾವತಿ ಕಣ್ಣೀರು

Published

on

– ರವಿ ನೆನೆದು ಭಾವುಕರಾದ ವಿನೋದ್ ರಾಜ್

ನೆಲಮಂಗಲ: ಹಿರಿಯ ಪತ್ರಕರ್ತ, ಖ್ಯಾತ ಬರಹಗಾರ ರವಿ ಬೆಳಗೆರೆ ಅವರ ನೆನೆದು ಹಿರಿಯ ನಟಿ ಡಾ. ಲೀಲಾವತಿ ಕಣ್ಣಿರಿಟ್ಟಿದ್ದಾರೆ.

ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹೃದಯಾಘಾತದಿಂದ ಸಾವನ್ನಪ್ಪಿರುವ ರವಿ ಬೆಳೆಗೆಯವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡು ದುಃಖತಪ್ತರಾದರು.

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನನ್ನನ್ನು ಅಮ್ಮ ಎಂದು ಎಷ್ಟು ಪ್ರೀತಿಯಿಂದ ಕರೆಯತ್ತಿದ್ರಿ. ನಿಮ್ಮ ಹೆಸರು ಅಮರವಾಗಿ ಉಳಿಯುವ ಹಾಗೆ ಮಾಡಲಿ. ನಿಮ್ಮ ಕೀರ್ತಿ ಪ್ರಪಂಚದಾದ್ಯಂತ ಬೆಳಗುತ್ತಿರಲಿ. ನಿಮ್ಮ ಶಕ್ತಿ ಮಕ್ಕಳು, ನಂಬಿದವರು ಎಲ್ಲರಿಗೂ ಹಂಚಿ ನಿಮ್ಮ ಹೆಸರು ಅಮರವಾಗಿ ಉಳಿಯುವಂತಾಗಲಿ ಎಂದು ಹೇಳುತ್ತಾ ಲೀಲಾವತಿ ಕಣ್ಣೀರು ಹಾಕಿದ್ದಾರೆ.

ಇದೇ ವೇಳೆ ಪುತ್ರ ವಿನೋದ್ ರಾಜ್ ಮಾತನಾಡಿ, ಸಿಂಹದ ರೀತಿಯಲ್ಲಿ ಇದ್ದವರು. ಅವರ ಒಂದೊಂದು ಮಾತು ಒಂದೊಂದು ಪುಸ್ತಕ ಬರೆಯುತ್ತೆ. ನಮ್ಮ ಬಗ್ಗೆ ತುಂಬಾ ಕಾಳಜಿ ಇದ್ದ ವ್ಯಕ್ತಿ ರವಿ ಎಂದು ಗದ್ಗದಿತರಾದರು.

ಕೆಲವು ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಕ್ಷರ ಮಾಂತ್ರಿಕ ರವಿ ಬೆಳಗೆರೆಯವ ನಿಧನರಾಗಿದ್ದು, ಗಣ್ಯರು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in