Tuesday, 18th June 2019

ಇಡಿ ಬಂಧನದಿಂದ ತಪ್ಪಿಸಿಕೊಳ್ಳಲು ಡಿಕೆಶಿಯಿಂದ ಮಾಸ್ಟರ್ ಪ್ಲಾನ್..?

ಬೆಂಗಳೂರು: ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಂಧನ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಇಡಿಯಿಂದ ತಪ್ಪಿಸಿಕೊಳ್ಳಲು ಡಿಕೆಶಿ ಮಾಡಿದ್ದಾರೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಚಿವರು ಈಗಾಗಲೇ ವಕೀಲರು, ನುರಿತ ಆಡಿಟರ್ ಗಳ  ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಇ.ಡಿ ವಿಚಾರಣೆಗೆ ಕರೆದರೆ ಹೇಗೆ ಉತ್ತರಿಸಬೇಕು ಅನ್ನೋದರ ಬಗ್ಗೆ ಕೂಡ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಯಾವಾಗ ಏನ್ ಬೇಕಾದ್ರು ಆಗಬಹುದು. ಇದಕ್ಕೆ ಸಜ್ಜಾಗಿರಿ ಅಂತ ಹೇಳಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನು ಓದಿ: ಬಿಜೆಪಿ ಅವರೆಲ್ಲ ನನ್ನ ಗೆಳೆಯರು – ಡಿಕೆಶಿ

ಇ.ಡಿ. ಬಂಧಿಸದೇ ಹೋದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಆ್ಯಂಟಸಿಪೇಟರಿ ಬೇಲ್‍ಗಾಗಿ ಘಟಾನುಘಟಿ ವಕೀಲರ ಜೊತೆ ನಿಕಟ ಸಂಪರ್ಕ ಹೊಂದಿರುವ ಸಚಿವರು, ಐಟಿ ಕೇಸ್‍ನಲ್ಲಿ ಬಚಾವ್ ಮಾಡಿದ್ದ ಹಿರಿಯ ವಕೀಲರ ಜೊತೆಗೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಯೊಳಗೆ ಡಿ.ಕೆ. ಶಿವಕುಮಾರ್ ಬಂಧನ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ಡಿಕೆಶಿ ಬಂಧನವಾದ್ರೆ ಇಡಿ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಬಂಧಿಸದಿದ್ದರೆ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಐಟಿ ಕೇಸ್‍ನಲ್ಲಿ ಬಚಾವ್ ಮಾಡಿದ್ದ ಹಿರಿಯ ವಕೀಲರ ಸಂಪರ್ಕದಲ್ಲಿದ್ದಾರೆ. ಇದನ್ನು ಓದಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್

ಇತ್ತ ಅಣ್ಣ ಶಿವಕುಮಾರ್ ಜೊತೆ ರಾತ್ರಿಯೆಲ್ಲಾ ಇದ್ದ ಸಹೋದರ ಸುರೇಶ್ ತಡರಾತ್ರಿ 11.30ರ ವೇಳೆಗೆ ಡಿಕೆಶಿ ಮನೆಗೆ ಭೇಟಿ ನೀಡಿದ್ದರು. ಅಣ್ಣನ ಜೊತೆ ನಾನು ಮಾತನಾಡಲು ಬಂದಿದ್ದೇನೆ. ಶುಕ್ರವಾರ ಬೆಳಗ್ಗೆ ದೆಹಲಿಗೆ ಹೋಗಬೇಕಿತ್ತು. ಆದ್ರೆ ಮಾಧ್ಯಮಗಳಲ್ಲಿ ವದಂತಿ ಬಂದ ಹಿನ್ನಲೆ ಇಲ್ಲೇ ಉಳಿದುಕೊಂಡಿದ್ದಾರೆ. ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಇ.ಡಿ ಎಫ್‍ಐಆರ್ ಮಾಡ್ಲಿ. ನಾನಾಗ್ಲಿ, ಡಿಕೆ ಶಿವಕುಮಾರ್ ಆಗ್ಲಿ ಭಯ ಪಡುವ ಪ್ರಮೇಯವೇ ಇಲ್ಲ. ಸರ್ಕಾರ ಹಾಗೂ ನಾವು ಇದನ್ನು ಫೇಸ್ ಮಾಡ್ತೀವಿ ಅಂತ ಸಂಸದ ಡಿಕೆ ಸುರೇಶ್ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಖಡಕ್ಕಾಗಿ ನುಡಿದಿದ್ದರು.

ಏನಿದು ಪ್ರಕರಣ..?
* 2017ರ ಆಗಸ್ಟ್ 02ರಂದು ಡಿಕೆಶಿ ಮನೆ, ಕಚೇರಿಗಳ ಮೇಲೆ ಐಟಿ ದಾಳಿ
* ಸಚಿವ ಡಿಕೆ ಶಿವಕುಮಾರ್ ಉಳಿದುಕೊಂಡಿದ್ದ ಈಗಲ್‍ ಟನ್ ರೆಸಾರ್ಟ್ ಮೇಲೆ ರೇಡ್
* ಡಿ.ಕೆ.ಶಿವಕುಮಾರ್‍ಗೆ ಸೇರಿದ ದೆಹಲಿಯ ಸಫ್ದರ್‍ಜಂಗ್ ನಿವಾಸ ಮೇಲೆಯೂ ದಾಳಿ
* ದೆಹಲಿಯ ಡಿಕೆಶಿ ಮತ್ತು ಆಪ್ತನ ನಿವಾಸಗಳಲ್ಲಿ 8.59 ಕೋಟಿ ರೂ. ಹಣ ಪತ್ತೆ
* ಐಟಿ ದಾಳಿ ವೇಳೆ ಸಿಕ್ಕ ಹಣದ ಮೂಲದ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪ
* ಹವಾಲ ಮೂಲಕ ಹೈಕಮಾಂಡ್‍ಗೆ ಹಣ ವರ್ಗಾವಣೆ ಸಾಧ್ಯತೆ ಬಗ್ಗೆ ಐಟಿ ದೂರು
* ದೆಹಲಿಯಲ್ಲಿ ಹಣ ಸಿಕ್ಕ ಕಾರಣ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ
* ಜಾರಿ ನಿರ್ದೇಶನಾಲಯದಿಂದ ತನಿಖೆ, ಎಫ್‍ಐಆರ್ ಸಾಧ್ಯತೆ


ಜಾರಿ ನಿರ್ದೇಶನಾಲಯ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡ್ರೆ ಮುಂದೆ ಏನಾಗಬಹುದು?
* ಡಿ.ಕೆ.ಶಿವಕುಮಾರ್ ಬಂಧನ ಆಗಬಹುದು
* ಸಚಿವ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ಕೊಡಬಹುದು
* ಡಿಕೆಶಿ ಹೆಸರಲ್ಲಿರುವ ಆಸ್ತಿ-ಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು
* ಆರೋಪ ಸಾಬೀತಾದ್ರೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಆಗಬಹುದು

ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ ಕೆ ಶಿವಕುಮಾರ್ ಅವರೇ ಕೇಂದ್ರ ಸರ್ಕಾರದ ಟಾರ್ಗೆಟ್ ಯಾಕೆ?
* ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು
* ಬಹುಮತ ಸಾಬೀತು ವೇಳೆ `ಕೈ’ಗೆ ಸಿಗದಿದ್ದ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದು
* ಗುಜರಾತ್‍ನಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ `ಕೈ’ ಶಾಸಕರನ್ನು ರೆಸಾರ್ಟ್ ನಲ್ಲಿ ರಕ್ಷಿಸಿದ್ದು
* ಸೋನಿಯಾ ಆಪ್ತ ಅಹ್ಮದ್ ಪಟೇಲ್ ಗೆಲುವಿಗೆ ಡಿಕೆಶಿ ರಣತಂತ್ರ ಕಾರಣವಾಗಿತ್ತು

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *