Connect with us

ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್

ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್

ವಾಷಿಂಗ್ಟನ್: ವಿಶ್ವಾದ್ಯಂತ ಇಂದು ಸಾಮಾಜಿಕ ಜಾಲತಾಣ, ಸರ್ಕಾರ ಮತ್ತು ಕೆಲ ಪ್ರಮುಖ ಸುದ್ದಿ ವೆಬ್‍ಸೈಟ್‍ಗಳು ಡೌನ್ ಆಗಿತ್ತು.

ಅಮೆರಿಕ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಸೇವಾ ಪೂರೈಕೆದಾರ ಫಾಸ್ಟ್ಲಿಯಲ್ಲಿನ ಸಿಡಿಎನ್(Content Delivery Network) ದೋಷದಿಂದ ಹಲವು ವೆಬ್‍ಸೈಟ್‍ಗಳಿಗೆ ಸಮಸ್ಯೆಯಾಗಿತ್ತು. ಇದನ್ನೂ ಓದಿ: ವರ್ಕ್ ಫ್ರಂ ಹೋಮ್- ಇಂಟರ್ನೆಟ್‌ಗಾಗಿ ಗುಡ್ಡ ಹತ್ತಿ ಟೆಂಟ್ ಹಾಕಿದ ಯುವತಿ

ಈ ಬಗ್ಗೆ ಪ್ರತಿಕ್ರಿಯಿಸಿದ ಫಾಸ್ಟ್ಲಿ ಜಾಗತಿಕವಾಗಿ ನಮ್ಮ ಪಿಒಪಿಗಳಲ್ಲಿ ಸಮಸ್ಯೆ ಕಾರಣವಾಗಿದ್ದ ಸರ್ವಿಸ್ ಕಾನ್ಫಿಗರೇಷನ್ ನನ್ನು ಗುರುತಿಸಿದ್ದೇವೆ ಮತ್ತು ಆ ಕಾನ್ಫಿಗರೇಷನ್ ಅನ್ನು ನಿಷ್ಕ್ರಿಯಗೊಳಿಸಿದ್ದೇವೆ. ನಮ್ಮ ಜಾಗತಿಕ ನೆಟ್‍ವರ್ಕ್ ಮತ್ತೆ ಸರಿಯಾಗುತ್ತಿದೆ ಎಂದು ಹೇಳಿದೆ.

ಅಮೆಜಾನ್, ರೆಡಿಟ್, ಫೈನಾನ್ಷಿಯಲ್ ಟೈಮ್ಸ್, ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಬ್ಲೂಮ್‍ಬರ್ಗ್ ನ್ಯೂಸ್, ಇಂಗ್ಲೆಂಡ್ ಸರ್ಕಾರ ಸೇರಿದಂತೆ ಸುದ್ದಿ ಸಂಸ್ಥೆಗಳು ನಿರ್ವಹಿಸುವ ವೆಬ್‍ಸೈಟ್‍ಗಳು ಡೌನ್ ಆಗಿತ್ತು.