Connect with us

Crime

ಪತಿಯನ್ನ ಹೊರಗೆ ನಿಲ್ಲಿಸಿ ಬ್ಯೂಟಿ ಪಾರ್ಲರ್‌ಗೆ ಹೋದ ಪತ್ನಿ ಜೂಟ್

Published

on

– ಸಿಸಿಟಿವಿಯಲ್ಲಿ ಇನಿಯನ ಜೊತೆ ಪಲಾಯನ ದೃಶ್ಯ ಸೆರೆ

ಪಾಟ್ನಾ: ಪತಿಯನ್ನ ಹೊರಗೆ ನಿಲ್ಲಿಸಿ ಬ್ಯೂಟಿ ಪಾರ್ಲರ್ ಒಳಗೆ ಹೋದ ಪತ್ನಿ ಮತ್ತೊಂದು ದ್ವಾರದ ಮೂಲಕ ಇನಿಯನ ಜೊತೆ ಎಸ್ಕೇಪ್ ಆಗಿರುವ ಘಟನೆ ಪಶ್ಚಿಮ ಚಂಪಾರಣ ಜಿಲ್ಲೆಯ ಬೇತಿಯಾದಲ್ಲಿ ನಡೆದಿದೆ. ಅಕ್ಟೋಬರ್ 3ರಂದು ಘಟನೆ ನಡೆದಿದ್ದು, ಪತಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಮಹಿಳೆ ತವರು ಮನೆಗೆ ಬಂದಿದ್ದರು. ಪತ್ನಿಯನ್ನ ಕರೆದುಕೊಂಡು ಹೋಗಲು ಪತಿ ಅತ್ತೆ ಮನೆಗೆ ಬಂದಿದ್ದರು. ಅಕ್ಟೋಬರ್ ಮೂರರಂದು ತಾನು ಕೆಲ ವಸ್ತು ಮತ್ತು ಮೇಕಪ್ ಮಾಡಿಸಿಕೊಳ್ಳಲು ಬೇತಿಯಾ ಕರೆದೊಯ್ಯುವಂತೆ ಹೇಳಿದ್ದಳು. ಪತಿ ಸಹ ಪತ್ನಿಯನ್ನ ಬೇತಿಯಾ ಕರೆತಂದಿದ್ದರು. ಮೇಕಪ್ ಮಾಡಿಸಿಕೊಳ್ಳಲು ಬ್ಯೂಟಿಪಾರ್ಲರ್ ಒಳಗೆ ಹೋದಾಗ ಪತಿ ಹೊರಗೆ ಕಾಯುತ್ತಿದ್ದರು. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕೊಲೆ- ನಾಪತ್ತೆ ನಾಟಕವಾಡಿ ಸಿಕ್ಕಿಬಿದ್ದ ಪತ್ನಿ

ಒಳಗೆ ಹೋದ ಪತ್ನಿ ದೀರ್ಘ ಸಮಯವಾದ್ರೂ ಹೊರಗೆ ಬಾರದಿದ್ದಾಗ ಸಿಬ್ಬಂದಿಯನ್ನ ವಿಚಾರಿಸಿದ್ದಾರೆ. ಮಹಿಳೆ ಮತ್ತೊಂದು ದ್ವಾರದ ಮೂಲಕ ಹೋಗಿರುವ ಬಗ್ಗೆ ಹೇಳಿದ್ದಾರೆ. ಬ್ಯೂಟಿ ಪಾರ್ಲರ್ ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆ ಇನಿಯನ ಜೊತೆ ಹೋಗಿರೋದು ಸೆರೆಯಾಗಿದೆ. ಮಹಿಳೆ ಹೋಗುವಾಗ ಎರಡೂವರೆ ವರ್ಷದ ಮಗಳನ್ನು ಸಹ ಕರೆದುಕೊಂಡು ಹೋಗಿದ್ದಾಳೆ. ಇದನ್ನೂ ಓದಿ: ತನ್ನೊಂದಿಗೆ ಪ್ರಿಯತಮೆ ಬ್ರೇಕಪ್ ಮಾಡ್ಕೊಂಡಿದ್ದಕ್ಕೆ ಯುವಕನಿಂದ ನೀಚ ಕೃತ್ಯ

ಮಹಿಳೆಯ ಈ ಪತಿ ಸುಲ್ತಾನಗಂಜ್ ನಿವಾಸಿ ಇಮ್ರಾನ್ ಇಮಾಮ್ ವಿರುದ್ಧ ದೂರು ದಾಖಲಿಸಿದ್ದಾರೆ. 2017ರಲ್ಲಿ ಮಹಿಳೆಯ ಮದುವೆಯಾಗಿತ್ತು. 2019ರಲ್ಲಿ ಪರೀಕ್ಷೆಗಾಗಿ ಮಹಿಳೆ ಪಾಟ್ನಾಗೆ ತೆರಳಿದ್ದಾಗ ಇಮ್ರಾನ್ ಜೊತೆ ಓಡಿ ಹೋಗಿದ್ದಳು. ಅಂದು ಕುಟುಂಬಸ್ಥರು ಮಹಿಳೆಯನ್ನ ವಾಪಸ್ ಕರೆತಂದಿದ್ದರು. ಈಗ ಎರಡನೇ ಬಾರಿ ಇಮ್ರಾನ್ ಜೊತೆಯಲ್ಲಿ ಮಗಳೊಂದಿಗೆ ಮಹಿಳೆ ಕಾಲ್ಕಿತ್ತಿದ್ದಾಳೆ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಗಾಗಿ ಮಗನನ್ನೇ ಕಿಡ್ನಾಪ್ ಮಾಡಿದ!

Click to comment

Leave a Reply

Your email address will not be published. Required fields are marked *