Connect with us

Crime

ಮದುವೆಯಾಗಲು ಹೊರಟ ಜೋಡಿಯನ್ನು ಗುಂಡಿಟ್ಟು ಕೊಲೆಗೈದ್ರು!

Published

on

– ಯುವಕನ ಸಹೋದರನಿಗೂ ಗಂಭೀರ ಗಾಯ

ರೊಹ್ಟಕ್: ಮದುವೆಯಾಗಲು ತಯಾರಿಯಾಗಿದ್ದ ಜೋಡಿಯೊಂದನ್ನು ಹಾಡಹಗಲೇ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ.

ತನಿಖೆಯಲ್ಲಿ ಯುವಕನ ಪೋಷಕರು ಹೇಳುವ ಪ್ರಕಾರ ಆತನಿಗೆ ಸುಮಾರು 25 ವರ್ಷವಾಗಿದ್ದು, ಯುವತಿಗೆ 27 ವರ್ಷದವಳಾಗಿದ್ದಾಳೆ. ಇವರಿಬ್ಬರು ಒಬ್ಬರನ್ನು ಪ್ರೀತಿಸುತ್ತಿದ್ದು, ಕಾನೂನಿ ಪ್ರಕಾರ ಮದುವೆಯಾಗಲು ತಿಳಿಸಿದ್ದರು. ಇವರಿಬ್ಬರ ನಡುವೆ ವಯಸ್ಸಿನ ಅಂತರವಿರುವ ಕಾರಣ ಇಬ್ಬರ ಪ್ರೀತಿಗೆ ಯುವತಿಯ ಮನೆಯವರ ವಿರೋಧ ಮೊದಲಿನಿಂದಲೂ ಇತ್ತು ಎಂದು ಡಿಎಸ್‍ಪಿ ಸಜ್ಜನ್ ಸಿಂಗ್‍ಗೆ ತಿಳಿಸಿದ್ದಾರೆ.

ಯುವತಿಯನ್ನು ಭೇಟಿ ಮಾಡಲು ಯುವಕ ತನ್ನ ಸಹೋದರನೊಂದಿಗೆ ಮಹರ್ಷಿ ಯುನಿರ್ವಸಿಟಿ ಬಳಿ ಹೋಗಿದ್ದಾನೆ. ಇದೇ ಸಂದರ್ಭದಲ್ಲಿ ಇಬ್ಬರನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಯುವಕನ ಸಹೋದರ ಪೊಲೀಸರಿಗೆ ತಿಳಿಸಿದ್ದಾನೆ. ಮತ್ತು ಘಟನೆಯಲ್ಲಿ ಯುವಕನ ಸಹೋದರ ಕೂಡ ವಿಪರೀತ ಗಾಯಗೊಂಡಿದ್ದಾನೆ.

ಮೊದಲಿನಿಂದಲ್ಲೂ ಇವರಿಬ್ಬರ ಪ್ರೀತಿಗೆ ಹುಡುಗಿ ಮನೆಯವರ ನಿರಾಕರಣೆ ಇದ್ದು, ಅವರೇ ಇವರನ್ನು ಕೊಂದಿದ್ದಾರೆ ಎಂದು ಹುಡುಗನ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Click to comment

Leave a Reply

Your email address will not be published. Required fields are marked *