Connect with us

Bengaluru City

ನಟಿ ಮಾನ್ಯಾಗೆ ಪಾರ್ಶ್ವವಾಯು – ಗೆದ್ದು ಬರುತ್ತೇನೆ ಅಂದ ‘ಶಾಸ್ತ್ರಿ’ ಬೆಡಗಿ

Published

on

– ಸ್ವಾದೀನ ಕಳೆದುಕೊಂಡ ಎಡಗಾಲು

ಬೆಂಗಳೂರು: ತೆರೆ ಮೇಲೆ ಮಿಂಚಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ನಟಿ ಮಾನ್ಯಾ ನಾಯ್ಡು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಅನಾರೋಗ್ಯ ಸಮಸ್ಯೆಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳೊಂದಿಗೆ ಮಾನ್ಯ ಹಂಚಿಕೊಂಡಿದ್ದಾರೆ.

ಮೂರು ವಾರಗಳ ಹಿಂದಿನಿಂದ ಬೆನ್ನುರಿ ಸಮಸ್ಯೆ ಆಯ್ತು, ನನ್ನ ಎಡ ಕಾಲು ಬಹುತೇಕ ಸ್ವಾಧೀನ ಕಳೆದುಕೊಳ್ಳುವಂತಿತ್ತು. ನನಗೆ ಪಾರ್ಶ್ವವಾಯುವಾಗಿದೆ. ನನ್ನ ಬೆನ್ನುಮೂಳೆಗೆ ಇಂಜಕ್ಷನ್ ಮಾಡಲಾಯ್ತು. ನಾನು ತುಂಬ ಹೆದರಿದ್ದೇನು. ಕೊರೊನಾ ವೈರಸ್ ಇರೋದರಿಂದ ನಾನು ಏಕಾಂಗಿಯಾಗಿದ್ದೆ. ನಾನು ಬಹುಬೇಗ ಗುಣಮುಖಳಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೆನೆ ಎಂದಿದ್ದಾರೆ.

 

View this post on Instagram

 

A post shared by Manya (@manya_naidu)

ಕಳೆದ ಮೂರು ವಾರಗಳಿಂದ ನೋವಿನಿಂದಾಗಿ ನನಗೆ ಕೂರಲು ಆಗುತ್ತಿಲ್ಲ, ನಡೆಯಲು ಆಗುತ್ತಿಲ್ಲ, ಮಲಗಲಾಗುತ್ತಿಲ್ಲ, ನಿಂತುಕೊಳ್ಳಲಾಗುತ್ತಿಲ್ಲ, ಆದರೆ ನಾನು ಆದಷ್ಟು ಹುಷಾರಾಗಲು ಪ್ರಯತ್ನಪಡುತ್ತಿದ್ದೇನೆ. ಈ ಜೀವನ ನೀಡಿದ್ದಕ್ಕಾಗಿ ದೇವರಿಗೆ ಸದಾ ಋಣಿಯಾಗಿರುತ್ತೇನೆ. ನನ್ನ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ನನಗಾಗಿ ಪ್ರಾರ್ಥನೆ ಸಲ್ಲಿಸಿದವರೆಲ್ಲರಿಗೂ ಧನ್ಯವಾದಗಳು. ಜೀವನ ಸುಲಭವಲ್ಲ ಅನ್ನೋದನ್ನು ನೆನಪಿಡಿ. ಆದರೆ ಎಂದಿಗೂ ಹಿಂದೆ ಸರಿಯಬೇಡಿ ಎಂದು ತನಗಾಗಿರುವ ನೋವನ್ನು ಮಾನ್ಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Manya (@manya_naidu)

ಮಾನ್ಯ ತಮಗಾಗಿರುವ ನೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸಾಲು ಸಾಲು ಪೊಸ್ಟ್ ಹಾಕುವ ಮೂಲಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ಆಘಾತಕಾರಿ ವಿಚಾರವನ್ನು ಕೇಳಿದ ಅಭಿಮಾನಿಗಳು ಮಾನ್ಯಾ ನಾಯ್ಡುಗೆ ಧೈರ್ಯ ತುಂಬುತ್ತಿದ್ದಾರೆ. ಆರೋಗ್ಯದ ಕುರಿತಾಗಿ ಗಮನವನ್ನು ಕೊಡುವಂತೆ ಸಲಹೆ ಸೂಚನೆಯನ್ನು ನೀಡುತ್ತಿದ್ದಾರೆ.

 

View this post on Instagram

 

A post shared by Manya (@manya_naidu)

ನಾನು ಮತ್ತೆ ಡಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇನು. ಚೇತರಿಸಿಕೊಂಡ ನಂತರ ನೀವು ಮತ್ತೆ ಡಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ನಾನು ಗುಣಮುಖಳಾಗುತ್ತಿದ್ದೇನೆ ದೇವರಿಗೆ ಧನ್ಯವಾದವನ್ನು ಹೇಳುತ್ತೇನೆ. ಸಣ್ಣ ಸಮಸ್ಯೆಗಳು ನಿಮ್ಮನ್ನು ಬಲಪಡಿಸುತ್ತದೆ. ನಿಮ್ಮನ್ನು ನೀವು ಯಾವತ್ತು ಬಿಟ್ಟಕೊಡಬೇಡಿ. ನಾನು ತುಂಬಾ ನೊಂದಿದ್ದೇನೆ. ಅತ್ತಿದ್ದೇನೆ. ಆದರೆ ಗೆದ್ದು ಬರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಟನೆಯಿಂದ ದೂರವಾಗಿ ಮಗಳು, ಅಮ್ಮ, ಪತಿ ಜೊತೆ ನ್ಯೂಯಾರ್ಕ್‍ನಲ್ಲಿ ನೆಲೆಸಿದ್ದಾರೆ. ಕನ್ನಡದ ಕುರಿತಾಗಿ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ. ಹಲವು ಕನ್ನಡ ಸಿನಿಮಾಗಳಲ್ಲಿ ಅಭಿಮನಯಿಸುವ ಮೂಲಕವಾಗಿ ಕನ್ನಡಿಗರಿಗೆ ಹತ್ತಿರವಾಗಿದ್ದರು. ಇದೀಗ ದಕ್ಷಿಣ ಭಾರತದ ಟಾಪ್ ನಟಿಯರು ಪಡೆಯುವ ಸಂಭಾವನೆಗಿಂತ ಹೆಚ್ಚು ಹಣವನ್ನು ಮಾನ್ಯಾ  ಕಾರ್ಪೋರೇಟ್ ಕೆಲಸದಲ್ಲಿ ಪಡೆಯುತ್ತಿದ್ದಾರೆ. ಮಾನ್ಯ ಆದಷ್ಟು ಬೇಗಾ ಚೇತರಿಸಿಕೊಳ್ಳಲಿ ಎಂದು ನೆಟ್ಟಿಗರು ಪ್ರಾರ್ಥಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *