Connect with us

ಮನ್‍ಮುಲ್ ಹಗರಣ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳ ಅಮಾನತು

ಮನ್‍ಮುಲ್ ಹಗರಣ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳ ಅಮಾನತು

ಮಂಡ್ಯ: ಮನ್‍ಮುಲ್‍ಗೆ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಮೂಲಕ ಅಮಾನತುಗೊಂಡ ಅಧಿಕಾರಿಗಳ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.

ಈ ಪ್ರಕರಣ ಸಂಬಂಧಿಸಿದಂತೆ ಮನ್‍ಮುಲ್‍ನಲ್ಲಿ ಮೊದಲ ಹಂತದಲ್ಲಿ ನಾಲ್ವರು ಅಧಿಕಾರಿಗಳು, ಎರಡನೇ ಹಂತದಲ್ಲಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕರ್ನಾಟಕ ಹಾಲು ಮಹಾ ಮಂಡಳಿಯ ಜಂಟಿ ನಿರ್ದೇಶಕಿ ವಸಂತಲಾ ಹಾಗೂ ಮನ್‍ಮುಲ್‍ನ ಉಪ ವ್ಯವಸ್ಥಾಪಕಿ ಶೈಲಜಾ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್‍ಮುಲ್‍ನ 7 ಅಧಿಕಾರಿಗಳು ಅಮಾನತು

ಕರ್ನಾಟ ಹಾಲು ಮಹಾ ಮಂಡಳಿಯ ಜಂಟಿ ನಿರ್ದೇಶಕಿ ವಸಂತಲಾ ಅವರು ಮನ್‍ಮುಲ್‍ಗೆ ಟ್ಯಾಂಕರ್‍ ಗಳ ಮೂಲಕ ಬರುತ್ತಿದ್ದ ಹಾಲಿನ ಗುಣಮಟ್ಟವನ್ನು ಪರಿಶೀಲನೆ ಮಾಡದ ಕಾರಣ ಕೆಎಂಎಫ್ ಎಂಡಿ ಸತೀಶ್ ಅವರು ಅಮಾನತು ಮಾಡಿದ್ದಾರೆ. ಮನ್‍ಮುಲ್‍ನ ಸಂಸ್ಕರಣಾ ವಿಭಾಗದ ಶೈಲಜಾ ಅವರು ಕರ್ತವ್ಯ ಲೋಪವೆಸಗಿದ ಕಾರಣ ಅವರು ಕೂಡ ಅಮಾನತಿಗೆ ಒಳಗಾಗಿದ್ದಾರೆ.ಇದನ್ನೂ ಓದಿ:  ಮಂಡ್ಯ ಎಎಸ್‍ಪಿಗೆ ಸಚಿವ ಸೋಮಶೇಖರ್ ಫುಲ್ ಕ್ಲಾಸ್

Advertisement
Advertisement