Connect with us

Bengaluru City

ಕ್ರಿಕೆಟ್ ಬ್ಯಾಟ್ ರೀತಿ ಗನ್ ಬೆನ್ನಿಗೇರಿಸಿಕೊಂಡು ಬಂದ- ಮನೀಶ್ ಶೆಟ್ಟಿ ಮರ್ಡರ್ ಮಿಸ್ಟರಿ

Published

on

– ಗಾಂಧೀನಗರದ ಲಾಡ್ಜ್ ನಲ್ಲಿ ನಡೆದಿತ್ತು ಸ್ಕೆಚ್

ಬೆಂಗಳೂರು: ಕ್ರಿಕಟ್ ಬ್ಯಾಟ್ ರೀತಿ ಗನ್ ಬೆನ್ನಗೇರಿಸಿಕೊಂಡು ಬಂದು ರೌಡಿ ಹಾಗೂ ಡ್ಯೂಯೆಟ್ ಪಬ್ ಮಾಲೀಕ ಮನೀಶ್ ಶೆಟ್ಟಿಯನ್ನು ಆರೋಪಿ ನಿತ್ಯಾ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

ಅಕ್ಟೋಬರ್ 15ರಂದು ಬ್ರಿಗೇಡ್ ರಸ್ತೆಯಲ್ಲಿ ಡ್ಯೂಯೆಟ್ ಪಬ್ ಮುಂದೆ ರೌಡಿ ಮನೀಶ್ ಶೆಟ್ಟಿಯನ್ನ ಡಬಲ್ ಬ್ಯಾರಲ್ ಗನ್ ನಿಂದ ಶೂಟೌಟ್ ಮಾಡಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ಶಶಿಕರಣ್ ಅಲಿಯಾಸ್ ಮುನ್ನ, ಗಣೇಶ್, ನಿತ್ಯ, ಅಕ್ಷಯ್ ನಾಲ್ವರನ್ನು ಕಬ್ಬನ್ ಪಾರ್ಕ್ ಪೊಲೀಸರು ಗಾಂಧಿ ನಗರ ಲಾಡ್ಜ್ ನಲ್ಲಿ ಬಂಧಿಸಿದ್ದಾರೆ. ಅಲ್ಲದೆ ಸ್ಥಳ ಮಹಜರಿಗೆ ಹೋದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದರು. ಇದಾದ ಬಳಿಕ ವಿಚಾರಣೆ ವೇಳೆ ಇದೀಗ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದು, ಕೊಲೆಗೆ ಹಾಕಿದ ಸ್ಕೆಚ್ ಕುರಿತು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಹಂತಕರು ಗಾಂಧೀನಗರದ ಲಾಡ್ಜ್ ನಲ್ಲಿ ಕೊಲೆಗೆ ಸ್ಕೆಚ್ ರೂಪಿಸಿದ್ದರು. ಒಂದೇ ಬೈಕ್ ನಲ್ಲಿ ಮೂವರು ಹಂತಕರು ಬಂದು ಏಕಾಏಕಿ ಮನೀಶ್ ಶೆಟ್ಟಿ ಮೇಲೆ ದಾಳಿ ನಡೆಸಿದ್ದಾರೆ. ಬೆನ್ನ ಹಿಂದಿನ ಬ್ಯಾಗ್ ನಲ್ಲಿ ಡಬಲ್ ಬ್ಯಾರಲ್ ಗನ್ ಇಟ್ಟುಕೊಂಡು ಬಂದಿದ್ದ ಆರೋಪಿಗಳು, ಕ್ರಿಕೆಟ್ ಬ್ಯಾಟ್ ರೀತಿ ಹಾಕಿಕೊಂಡು ಬಂದಿದ್ದರು. ಮನೀಶ್ ಶೆಟ್ಟಿ ಮೇಲೆ ಆರೋಪಿ ನಿತ್ಯಾ ಫೈರಿಂಗ್ ಮಾಡಿದ್ದು, ಇದೇ ವೇಳೆ ಅಕ್ಷಯ್ ಬಾರ್ ನ ಎಂಟ್ರೆನ್ಸ್ ಮುಂಭಾಗವೇ ಮಾರಕಾಸ್ತ್ರ ದೊಂದಿಗೆ ಅವಿತುಕೊಂಡಿದ್ದ. ಗುಂಡೇಟು ತಿಂದು ಎರಡು ಹೆಜ್ಜೆ ಇಡುವಷ್ಟರಲ್ಲಿ ಅಕ್ಷಯ್ ಮಚ್ಚಿನಿಂದ ದಾಳಿ ಮಾಡಿದ್ದಾನೆ.

ಅಕ್ಷಯ್ ನಾಲ್ಕು ಬಾರಿ ಮನೀಶ್ ಶೆಟ್ಟಿ ಕುತ್ತಿಗೆಗೆ ಹೊಡೆದಿದ್ದು, ಮಚ್ಚು ಸುಮಾರು 18 ಇಂಚು ಒಳ ಹೋಗಿತ್ತು. ಬಳಿಕ ಆರೋಪಿ ಗಣೇಶ್ ಬೈಕ್ ಓಡಿಸಿದ್ದ. ಮೂವರೂ ಒಂದೇ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದರು. ಹೀಗೆ ಭೀಕರವಾಗಿ ಮನೀಶ್ ಶೆಟ್ಟಿ ಹತ್ಯೆ ಮಾಡಿರುವ ಕುರಿತು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಕಳೆದ ನಾಲ್ಕು ತಿಂಗಳಿಂದ ಸ್ಕೇಚ್ ಹಾಕಿ ಹತ್ಯೆ ಮಾಡಿದ್ದಾರೆ. ಆರೋಪಿಗಳ ಹತ್ಯೆಗೆ ಪ್ರಮುಖ ಕಾರಣ ತನಿಖೆಯಿಂದ ತಿಳಿಯಬೇಕಿದೆ. ಎ1 ಆರೋಪಿ ಮುನ್ನಾ ವಿರುದ್ಧ ಕೊಲೆ, ಕೊಲೆ ಯತ್ನ ಪ್ರಕರಣಗಳಿವೆ. ಘಟನೆಯಲ್ಲಿ ಹಲವು ಅನುಮಾನಗಳಿಗಿವೆ ಎಲ್ಲ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಅಂಡರ್ ವಲ್ರ್ಡ್ ಕೈವಾಡದ ಶಂಕೆ ಇದ್ದು ತನಿಖೆ ನಡೆಯುತ್ತಿದೆ.

ಕಾಲಿಗೆ ಗುಂಡು ಹೊಡೆದು ಬಂಧನ
ಮಚ್ಚಿನೇಟಿಗೆ ಮನೀಶ್ ಶೆಟ್ಟಿ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದಿದ್ದ. ಸಾವನ್ನಿಪ್ಪಿರುವುದು ತಿಳಿಯುತ್ತಿದ್ದಂತೆ ಕೃತ್ಯಕ್ಕೆ ಬಳಸಿದ್ದ ಬೈಕ್ ಮತ್ತು ಗನ್ ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಗನ್ ಬಿಟ್ಟು ಪರಾರಿಯಾಗಲು ಕಾರಣವನ್ನೂ ನೀಡಿರುವ ಆರೋಪಿಗಳು, ಅಂಡರ್ ವಲ್ರ್ಡ್ ಅಟ್ಯಾಕ್ ನಲ್ಲಿ ಇದೇ ರೀತಿ ಜ್ಯಾಮ್ ಇರುತ್ತೆ. ಹೀಗಾಗಿ ದಾಳಿ ಬಳಿಕ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಗನ್ ಬಿಟ್ಟು ಬಿಟ್ಟು ಪರಾರಿಯಾಗಿದ್ದಾಗಿ ತಿಳಿಸಿದ್ದಾರೆ.

ಮನೀಶ್ ಶೆಟ್ಟಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಕಬ್ಬನ್ ಪಾರ್ಕ್ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು. ಘಟನೆ ಸಂಬಂದ ಒಟ್ಟು ನಾಲ್ವರನ್ನು ಕಬ್ಬನ್ ಪಾರ್ಕ್ ಪೊಲೀಸರು ಗಾಂಧಿ ನಗರದ ಲಾಡ್ಜ್ ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸ್ಪಾಟ್ ಮಹಾಜರ್‍ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪ್ರಕರಣದ ಎ1 ಆರೋಪಿ ಶಶಿಕಿರಣ್ ಮುನ್ನಾ ಮತ್ತು ಎ4 ಆರೋಪಿ ಅಕ್ಷಯ್ ಏಕಾಏಕಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಇಬ್ಬರ ಕಾಲಿಗೆ ಗುಂಡು ಹೊಡೆದಿದ್ದಾರೆ. ಆರೋಪಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Click to comment

Leave a Reply

Your email address will not be published. Required fields are marked *