Crime
ಸಂಸ್ಥೆ ಬದುಕಲು ಬಿಡ್ತಿಲ್ಲ, ಸಹೋದರನ ಮೇಲೆ ಅಸಮಾಧಾನ – ಕೆಎಸ್ಆರ್ಟಿಸಿ ನೌಕರ ಆತ್ಮಹತ್ಯೆ
ಮಂಗಳೂರು: ಡೆತ್ ನೋಟ್ ಬರೆದು ಕೆಎಸ್ಆರ್ಟಿಸಿ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಬಾಲಕೃಷ್ಣ ಎಂದು ಗುರುತಿಸಲಾಗಿದ್ದು, ಇವರು ಬಿ.ಸಿರೋಡ್ ಕೆಎಸ್ಆರ್ಟಿಸಿ ಡಿಪೋದಲ್ಲಿ ಭದ್ರತಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಮಂಗಳೂರು ಹೊರವಲಯದ ತೊಕ್ಕೊಟ್ಟುವಿನ ರೈಲ್ವೇ ಬ್ರಿಡ್ಜ್ ನಿಂದ ನೇತ್ರಾವತಿ ನದಿಗೆ ಹಾರಿ ಬಾಲಕೃಷ್ಣ ಸೂಸೈಡ್ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮೊದಲು ಡೆತ್ನೋಟ್ ಬರೆದಿಟ್ಟಿದ್ದ ಬಾಲಕೃಷ್ಣ, ಸಂಸ್ಥೆ ನನ್ನನ್ನು ಬದುಕಲು ಬಿಡುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಕೌಟುಂಬಿಕ ಕಲಹದ ಬಗ್ಗೆಯೂ ಬರೆದಿರುವ ಅವರು, ತನ್ನ ಸಹೋದರನ ವಿರುದ್ಧವು ಅಸಮಾಧಾನ ಹೊರಹಾಕಿದ್ದಾರೆ.
ಆರ್ಥಿಕ ಸಮಸ್ಯೆಯ ಜೊತೆ ಕೌಟುಂಬಿಕ ಕಲಹವೂ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.