Dakshina Kannada
ಮಂಗಳೂರಲ್ಲೂ ಬಂದ್- ಕಾಸರಗೋಡು, ಪುತ್ತೂರು, ಧರ್ಮಸ್ಥಳಕ್ಕೆ ಬಸ್ ಇಲ್ಲ

ಮಂಗಳೂರು: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದೆ. ಈ ಮೂಲಕ ಸರ್ಕಾರಿ ಸಾರಿಗೆ ನೌಕರರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸಿಕ್ಕಂತಾಗಿದೆ.
ಮಂಗಳೂರಿನಿಂದ ಈವರೆಗೆ ಕೆಎಸ್ಆರ್ಟಿಸಿ ಬಸ್ಸುಗಳು ಸಂಚರಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಾಸರಗೋಡು, ಪುತ್ತೂರು, ಧರ್ಮಸ್ಥಳ ಭಾಗಗಳಿಗೂ ಬಸ್ ಇಲ್ಲ.
ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ಕಾಸರಗೋಡು ತೆರಳೋ ಪ್ರಯಾಣಿಕರ ಪರದಾಟ ಅನುಭವಿಸುತ್ತಿದ್ದಾರೆ. ನಿನ್ನೆಯವರೆಗೆ ಸಂಚಾರ ನಡೆಸಿದ್ದ ಕೆಎಸ್ಆರ್ಟಿಸಿ ಬಸ್ಸುಗಳು ಇಂದು ಏಕಾಏಕಿ ಸ್ಥಗಿತಗೊಳಿಸಿದ್ದಾರೆ. ಚಾಲಕರು ಬಸ್ಸುಗಳನ್ನು ನಿಲ್ದಾಣದಲ್ಲಿಯೇ ನಿಲ್ಲಿಸಿ ಹೋಗಿದ್ದು, ಹೋಗಾಗಿ ಪ್ರಯಾಣಿಕರು ಬಸ್ಸು ಇದೆ ಎಂದು ಬಂದು ಇದೀಗ ಪೇಚಿಗೆ ಸಿಲುಕಿದ್ದಾರೆ.
ಮೂರನೇ ದಿನವಾದ ನಿನ್ನೆಯ ಮುಷ್ಕರದ ಬಿಸಿ ಮಂಗಳೂರಿಗೆ ತಟ್ಟಿರಲಿಲ್ಲ. ಮಂಗಳೂರು ವಿಭಾಗದಲ್ಲಿ ಎಂದಿನಂತೆ ಸಾರಿಗೆ ಸೇವೆ ಆರಂಭ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಬಸ್ಸುಗಳು ಸಂಚರಿಸುತ್ತಿದ್ದವು. ಅಲ್ಲದೆ ಕೇರಳದ ಕಾಸರಗೋಡಿಗೂ ಸಂಚಾರವಿತ್ತು.
ಹೊರ ಜಿಲ್ಲೆಗೆ ಹೋಗುವ ಬಸ್ಸುಗಳ ಸಂಖ್ಯೆ ವಿರಳವಾಗಿತ್ತು. ಪ್ರಯಾಣಿಕರು ಕಡಿಮೆಯಾದ ಹಿನ್ನೆಲೆಯಲ್ಲಿ ಬಸ್ಸುಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕ ಕಡೆ ಹೋಗುವ ಬಸ್ಸುಗಳು ಕಡಿಮೆ ಇದ್ದವು. ಅಲ್ಲದೆ ಗೊಂದಲದಿಂದ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆ ಇತ್ತ.
