Dakshina Kannada
ಭಾರೀ ಗಾತ್ರದ ಮೀನು ಡಿಕ್ಕಿಯಾಗಿ ಬೋಟಿಗೆ ಹಾನಿ..!

ಮಂಗಳೂರು: ಭಾರೀ ಗಾತ್ರದ ಮೀನು ಡಿಕ್ಕಿಯಾಗಿ ದೋಣಿಗೆ ಹಾನಿಯಾಗಿರುವ ಘಟನೆ ಮಂಗಳೂರಿನ ಆಳಸಮುದ್ರದಲ್ಲಿ ನಡೆದಿದೆ. ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೀನು ದೊಡ್ಡ ಗಾತ್ರದ್ದಾಗಿದ್ದು, ಚೂಪು ಬಾಯಿ ಹೊಂದಿದೆ. ಇದನ್ನು ತುಳುವಿನಲ್ಲಿ ಮಡಲ್ ಮೀನ್ ಎಂದು ಕರೆಯಲಾಗುತ್ತಿದೆ.
ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಈ ಮೀನು ಬೋಟಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮೀನಿನ ಬಾಯಿ ಮುರಿದು ರಕ್ತಸ್ರಾವವಾಗಿದೆ. ಇತ್ತ ಮೀನು ಗುದ್ದಿದ ಪರಿಣಾಮ ಮೀನುಗಾರಿಕಾ ದೋಣಿಗೆ ಹಾನಿಯಾಗಿದೆ.
ನಿನ್ನೆ ನಸುಕಿನ ಜಾವ 3.32ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಇದರ ವೀಡಿಯೋ ವೈರಲ್ ಆಗಿದೆ.
