Connect with us

Dakshina Kannada

ಲುಂಗಿ ಡ್ಯಾನ್ಸ್‌ಗೆ ಸ್ಟೆಪ್ ಹಾಕಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್

Published

on

ಮಂಗಳೂರು: ನಗರ ಪೊಲೀಸ್ ಅಂದ್ರೆ ಯಾವಾಗಲೂ ಏನಾದರೂ ಒಂದು ಕಿರಿ ಕಿರಿ ಇದ್ದೇ ಇರುತ್ತೆ. ಯಾಕಂದ್ರೆ ಹೇಳಿ ಕೇಳಿ ಮಂಗಳೂರು ಮೋಸ್ಟ್ ಹ್ಯಾಪನಿಂಗ್ ಸಿಟಿ. ಸದ್ಯ ಈ ಪೊಲೀಸರಿಗೆ ಒಂದು ಸವಾಲು ಮತ್ತೆ ಮಸ್ತಿ ಮಾಡಲು ಒಂದು ಕಾರ್ಯಕ್ರಮ ಮಾಡಲಾಗಿತ್ತು. ಇದ್ರಲ್ಲಿ ಪೊಲೀಸ್ ಸಖತ್ ಎಂಜಾಯ್ ಮಾಡಿದ್ರು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಲುಂಗಿ ಡ್ಯಾನ್ಸ್ ಗೆ ಸಖತದ ಸ್ಟೆಪ್ ಹಾಕಿದ್ದು, ಅವರಿಗೆ ಡಿಸಿಪಿ ಹರಿರಾಂ ಶಂಕರ್ ಸಾಥ್ ನೀಡಿದ್ರು. ಇವರಿಗೆ ಕೋಸ್ಟಲ್‍ವುಡ್ ಮತ್ತು ಸ್ಯಾಂಡಲ್‍ವುಡ್ ನಟ ಪೃಥ್ವಿ ಅಂಬರ್ ಸ್ಟೆಪ್ ಹಾಕಿಸಿದ್ರು.

ಕಳೆದ ಎರಡು ತಿಂಗಳಿನಿಂದ ಮಂಗಳೂರು ನಗರ ಪೊಲೀಸರಿಗೆ ದೈಹಿಕ ಸದೃಢತೆಯ ಕಾರ್ಯಗಾರ ನಡೆಯುತ್ತಿತ್ತು. ಅದರ ಸಮಾರೋಪ ಕಾರ್ಯಕ್ರಮದಲ್ಲಿ ಈ ರೀತಿ ಪೊಲೀಸರು ಸಖತ್ ಎಂಜಾಯ್ ಮಾಡಿದ್ರು. 70 ಕೆಜಿಗಿಂತ ಹೆಚ್ಚು ತೂಕ ಇದ್ದ ಪೊಲೀಸರಿಗೆ ಕಳೆದ ಎರಡು ತಿಂಗಳಿನಿಂದ ಯಾವುದೇ ಕೆಲಸ ಕೊಡದೇ ಕೇವಲ ವರ್ಕೌಟ್, ಯೋಗ ಮತ್ತು ವ್ಯಾಯಾಮಗಳನ್ನು ಮಾಡಿಸಲಾಗುತ್ತಿತ್ತು. ಪುರುಷ ಹಾಗೂ ಮಹಿಳಾ ಪೊಲೀಸರು ಎರಡು ತಿಂಗಳಲ್ಲಿ ಅಧಿಕ 8 ಕೆ.ಜಿ, ಕನಿಷ್ಠ ಮೂರು ಕೆ.ಜಿ ತೂಕ ಇಳಿಸಿದ್ದಾರೆ. ತೂಕ ಇಳಿಸಿದವರಿಗೆ ಸನ್ಮಾನಿಸಲಾಯ್ತು.

ಕಾರ್ಯಕ್ರಮದಲ್ಲಿ ಪೊಲೀಸರಿಂದ ಕಸರತ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಲ್ಲದೇ ವೃತ್ತಿಪರ ಕಲಾವಿದರು ಹಾಡು ನೃತ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದ್ರು. ಪೊಲೀಸರು ಮತ್ತು ಪೊಲೀಸ್ ಕುಟುಂಬ ಈ ಕಾರ್ಯಕ್ರಮವನ್ನು ಚೆನ್ನಾಗಿ ಎಂಜಾಯ್ ಮಾಡಿದ್ರು. ಇದೇ ವೇಳೆ ಪೊಲೀಸ್ ಇಲಾಖೆಯಿಂದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್.ಲಕ್ಷ್ಮಿಪ್ರಸಾದ್ ಮಾಡಿದ್ರು. ನಟ ಪೃಥ್ವಿ ಅಂಬರ್ ಜೊತೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಡನ್ನು ಕೂಡ ಹಾಡಿದ್ರು.

ಯಾವಾಗಲು ಕ್ರೈಮು, ಕೇಸು, ಕಾನೂನು ಸುವ್ಯವಸ್ಥೆ ಅಂತ ಜಂಜಾಟದಲ್ಲಿದ್ದ ಪೊಲೀಸರಿಗೆ ಇಂಹತ ಕಾರ್ಯಕ್ರಮದಿಂದ ಮತ್ತಷ್ಟು ಎನರ್ಜಿ ಬಂದಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ಕಡೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ನಡೆಸುವ ಬಗ್ಗೆ ರಾಜ್ಯ ಗೃಹ ಇಲಾಖೆ ಚಿಂತನೆಯನ್ನು ಮಾಡಿದೆ. ಇಂತಹ ಸ್ಟ್ರೆಸ್ ಬರ್ನ್ ಕಾರ್ಯಕ್ರಮಗಳನ್ನು ಆಗಾಗ ಆಗ್ತಾ ಇದ್ದರೆ ಸಮಾಜದ ಸ್ವಾಸ್ಥ ಕಾಪಾಡಲು ಪೊಲೀಸರಿಗೆ ಇನ್ನಷ್ಟು ಎನರ್ಜಿ ಕೂಡ ಬರುತ್ತೆ.

Click to comment

Leave a Reply

Your email address will not be published. Required fields are marked *