ಬೆಂಗಳೂರು: ಮಂಗಳೂರು ಬಾಂಬ್ ಸ್ಫೋಟ(Mangaluru Blast Case) ಉಗ್ರ ಕೃತ್ಯ ಎಂದು ದೃಢಪಟ್ಟರೂ ಶಾರೀಕ್(Shariq) ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದು ಬಂದಿರಲಿಲ್ಲ. ಆದರೆ ಈಗ ʼಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ʼ ಹೆಸರಿನ ಸಂಘಟನೆಯೊಂದು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ Islamic Resistance Council ಸಂಘಟನೆ ಅರೆಬಿಕ್ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ(Kadri Temple) ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ ಸಂಘಟನೆ ಹೇಳಿಕೊಂಡಿದೆ.
ಶಾರೀಕ್ ಪಂಪ್ವೆಲ್ ಬಳಿ ಬಾಂಬ್ ಸ್ಫೋಟ ನಡೆಸಲು ಪ್ಲ್ಯಾನ್ ನಡೆಸಿದ್ದ ಎಂಬ ಮಾಹಿತಿ ಆರಂಭದಲ್ಲಿ ಸಿಕ್ಕಿತ್ತು. ಆದರೆ ಈಗ ಕದ್ರಿ ದೇವಸ್ಥಾನ ಉಗ್ರರ ಟಾರ್ಗೆಟ್ ಆಗಿದ್ದರಿಂದ ಈ ಪ್ರಕರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ
ನ.23ರಂದು ಪ್ರಕಟಿಸಲಾದ ಅರೆಬಿಕ್ ಭಾಷೆಯಲ್ಲಿರುವ “Majlis Almuqawamat Al’islamia” ಪೋಸ್ಟ್ ಜೊತೆ ಬಾಂಬ್ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಎರಡು ಹಳೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.
ಅಷ್ಟೇ ಅಲ್ಲದೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಲಾಗಿದೆ. ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದೆ.
ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.
ಈ ಸಂಘಟನೆ ಇದೆಯೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ. ಕರ್ನಾಟಕ ಪೊಲೀಸ್ ಈ ಸಂಘಟನೆ ಅಸ್ತಿತ್ವದಲ್ಲಿದೆಯೇ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಕೇಂದ್ರ ಗೃಹ ಇಲಾಖೆಯ ಸಹಾಯವನ್ನು ಕೇಳಿದೆ.
ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನ 10ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಮಂಗಳೂರಿನ ಪ್ರಸಿದ್ಧ ದೇವಸ್ಥಾನವಾಗಿದೆ. ಮಂಗಳೂರು ಪಂಪ್ವೆಲ್ನಿಂದ 5 ಕಿ.ಮೀ ದೂರದಲ್ಲಿದ್ದರೆ ಸ್ಫೋಟ ನಡೆದ ಸ್ಥಳದಿಂದ 4.5 ಕಿ.ಮೀ ದೂರದಲ್ಲಿದೆ.