Crime
ಇಯರ್ ಎಂಡ್ ಪಾರ್ಟಿಗೆ ಬಂದಿದ್ದ ಪ್ರವಾಸಿಗ ಸಾವು

– ನೀರಿನಲ್ಲಿ ಮುಳುಗಿದ ಐವರಲ್ಲಿ ನಾಲ್ವರ ರಕ್ಷಣೆ
ಮಂಗಳೂರು: ಇಯರ್ ಎಂಡ್ ಪಾರ್ಟಿಗೆ ಬಂದು ಈಜಲು ನೀರಿಗೆ ಇಳಿದ ಐವರು ಪ್ರವಾಸಿಗರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಡಬ ಮೂಲದ ಜಯರಾಮ್ ಗೌಡ(48) ಮೃತ ಪ್ರವಾಸಿಗ. ಸ್ನೇಹಿತರೊಂದಿಗೆ ಹೊಸ ವರ್ಷದ ಪಾರ್ಟಿಗೆಂದು ಬಂದು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜಯರಾಮ್ ಜೊತೆಯಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
ಡಿಸೆಂಬರ್ 31 ರಂದು ಕೆರಿಬಿಯನ್ ಸೀ ಹೋಮ್ ರೆಸಾರ್ಟ್ಗೆ ಇಯರ್ ಎಂಡ್ ಪಾರ್ಟಿಗೆ ಜಯರಾಮ್ ಮತ್ತು ಸ್ನೇಹಿತರು ಬಂದಿದ್ದರು. ಸಸಿಹಿತ್ಲು ಬೀಚ್ ಬಳಿ ನಿಷೇಧ ಇದ್ದ ಕಾರಣ ಬೇರೆ ಮಾರ್ಗ ಹುಡುಕಿದ್ದಾರೆ. ಸಮುದ್ರದ ಪಕ್ಕದ ಶ್ಯಾಮಂಪವಿ ನದಿಯಲ್ಲಿ ಈಜಲು ಹೋಗಿದ್ದಾರೆ. ಚಿತ್ರಾಪು ಅಳಿವೆ ಬಾಗಿಲು ಬಳಿಯಿಂದ ಬೀಚ್ಗೆ ಹೋಗಿದ್ದ ಐವರು ಪ್ರವಾಸಿಗರು ನೀರಿಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ನಾಲ್ವರನ್ನು ಸರ್ಫರ್ ಶ್ಯಾಮ್ ರಕ್ಷಿಸಿದ್ದಾರೆ.
ಡಿಸೆಂಬರ್ 31 ರಂದು ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಲ್ವರ ಪ್ರಾಣವನ್ನು ರಕ್ಷಿಸಿದ ಸರ್ಫರ್ ಶ್ಯಾಮ್ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
