Connect with us

Crime

ಮಂಡ್ಯದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡ್ತಿದ್ದ ಶಿಕ್ಷಕ ಅರೆಸ್ಟ್

Published

on

ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಶಿಕ್ಷಕನನ್ನು ಬಿ.ಟಿ.ಕೃಷ್ಣೇಗೌಡ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದರ ಜೊತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಫೇಲ್ ಮಾಡುತ್ತೇನೆ ಎಂದು ಸಹ ಹೆದರಿಸುತ್ತಿದ್ದ.

ಕೊನೆಗೆ ಈತನ ಕಿರುಕುಳ ತಾಳಲಾರದೆ ವಿದ್ಯಾರ್ಥಿಯನಿಬ್ಬರು ತಮ್ಮ ಪೋಷಕರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ಆದರೆ ಪೋಷಕರು ಮರ್ಯಾದೆಗೆ ಅಂಜಿ ಶಿಕ್ಷಕ ಕೃಷ್ಣೇಗೌಡನನ್ನು ಗದರಿಸಿ ದೂರು ನೀಡದೆ ಸುಮ್ಮನಾಗಿದ್ದಾರೆ. ಇದಾದ ಬಳಿಕವು ಈ ಶಿಕ್ಷಕನ ಕಿರುಕುಳ ಮುಂದುವರಿದ ಕಾರಣ ಕೆಲ ಗ್ರಾಮಸ್ಥರು ಈತನ ಬಗ್ಗೆ ಬಿಇಓ ಬಸವರಾಜು ಅವರಿಗೆ ದೂರು ನೀಡಿದ್ದಾರೆ.

ಬಿಇಓ ಈ ಬಗ್ಗೆ ಶಾಲೆಗೆ ಬಂದು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಕೃಷ್ಣೇಗೌಡ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಖಚಿತವಾಗಿದೆ. ಬಳಿಕ ಕೃಷ್ಣೇಗೌಡನ ವಿರುದ್ಧ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರು ಪೋಕ್ಸೋ ಮತ್ತು ಎಸ್‍ಸಿ-ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಕೃಷ್ಣೇಗೌಡನನ್ನು ಬಂಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *