Connect with us

Bengaluru City

ನಕಲಿ ಖಾತೆ ತೆರೆದು ಸಿಎಂ ವಿರುದ್ಧ ಪೋಸ್ಟ್ ಹಾಕಿದ್ದ ಮಂಡ್ಯದ ಟೆಕ್ಕಿಯ ಬಂಧನ

Published

on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸಿಎಂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಖಾತೆಯನ್ನೂ ಬಿಟ್ಟಿಲ್ಲ. ನಕಲಿ ಖಾತೆ ಮಾಡಿ ಟ್ವೀಟ್ ಮಾಡಿದ್ದ ಮಂಡ್ಯ ಮೂಲದ ಟೆಕ್ಕಿ ಮಧುಸೂದನ್‍ನನ್ನ ಸಿಐಡಿ ಸೈಬರ್ ಕ್ರೈಂ ಪೊಲೀಸ್ರು ಬಂಧಿಸಿದ್ದಾರೆ.

ಸಿಎಂ ಟ್ವಿಟ್ಟರ್ ಖಾತೆಯನ್ನೇ ಹೋಲುವಂತೆ ಅಕೌಂಟ್ ಕ್ರಿಯೇಟ್ ಮಾಡ್ಕೊಂಡಿದ್ದ ಮಧುಸೂಧನ್, ಸಿಎಂ ವಿಧಾನಸೌಧದಲ್ಲಿ ನಿದ್ದೆ ಮಾಡ್ಬೇಕು. ಹೀಗಾಗಿ ಮನೆಯಲ್ಲಿ ನಿದ್ದೆ ಮಾಡೋದು ಬೇಕಾಗಿಲ್ಲ ಅಂತಾ ಟ್ವಿಟ್ ಕೂಡ ಮಾಡಿದ್ದನು.

ಈ ಬಗ್ಗೆ ಸಿಎಂ ಕಚೇರಿಯ ಅಧಿಕಾರಿಗಳು 2016ರ ಡಿಸೆಂಬರ್‍ನಲ್ಲಿ ಸಿಐಡಿಯ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ರು. ಇನ್ನು ವಿಚಾರಣೆ ವೇಳೆ ಹುಡುಗಾಟಕ್ಕೆ ಮಾಡಿರೋದಾಗಿ ಆರೋಪಿ ಪೊಲೀಸರ ಮುಂದೆ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.