Wednesday, 22nd May 2019

Recent News

‘ಕೇಳ್ರಪ್ಪೋ ಕೇಳಿ..ಹರದನಹಳ್ಳಿ ದೇವೇಗೌಡರು, ಮಕ್ಕಳು, ಅವರ ಮೊಮ್ಮಕ್ಕಳು, ಸೊಸೆಯಂದಿರು, ಮರಿ ಮೊಮ್ಮಕ್ಕಳು ಮಾತ್ರ ರೈತರು’

– ಡಂಗುರ ಹೊಡೆದು ಎಚ್‍ಡಿಡಿ ಕುಟುಂಬದ ವಿರುದ್ಧ ರೈತರ ವ್ಯಂಗ್ಯ ಭರಿತ ಪ್ರತಿಭಟನೆ
– ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಂಡ್ಯ: ರೈತರೊಬ್ಬರು ಡಂಗುರ ಸಾರುವ ರೀತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ ಭರಿತವಾಗಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರೈತರ ಪ್ರತಿಭಟನೆಗೆ ಜಿಲ್ಲೆಯಿಂದಲೂ ನೂರಾರು ರೈತರು ರೈಲಿನ ಮೂಲಕ ಬೆಂಗಳೂರು ತೆರಳಿದ್ದಾರೆ. ಇದಕ್ಕೂ ಮುನ್ನ ರೈತರೊಬ್ಬರು ಡಂಗುರು ಸಾರುವ ರೀತಿ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ ಭರಿತವಾಗಿ ಕಿಡಿಕಾರಿದ್ದಾರೆ. ರೈತರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ವಿಡಿಯೋದಲ್ಲಿ ರೈತರು, “ಕೇಳ್ರಪ್ಪೋ ಕೇಳಿ, ಕರ್ನಾಟಕದ ಮಹಾಜನರೇ ಕೇಳಿ, ರೈತರು ಎಂದರೆ ಯಾರು ಗೊತ್ತಾ? ಹರದನಹಳ್ಳಿ ದೇವೇಗೌಡರು, ದೇವೇಗೌಡರ ಮಕ್ಕಳು, ಅವರ ಮೊಮ್ಮಕ್ಕಳು, ಅವರ ಸೊಸೆಯಂದಿರು ಹಾಗೂ ಅವರ ಮರಿ ಮೊಮ್ಮಕ್ಕಳು ಮಾತ್ರ ರೈತರು. ಹಸಿರು ಶಾಲು ಹಾಕಿಕೊಂಡು ಪ್ರತಿಭಟನೆ ಮಾಡುವವರು ರೈತರಲ್ಲ. ಅವರೆಲ್ಲ ಕಳ್ಳರು, ದರೋಡೆಕೋರರು” ಎಂದು ಹೇಳಿದ್ದಾರೆ.

“ರೈತರು ಅಂದರೆ ಯಾರು ಗೊತ್ತೆ? ಕುಮಾರಸ್ವಾಮಿ, ಅವರ ಹೆಂಡತಿ ಹಾಗೂ ಮಕ್ಕಳು. ಅಲ್ಲದೇ ದೇವೇಗೌಡರಿಗೆ ಮತ ಹಾಕುವವರು ಮಾತ್ರ ರೈತರು. ಅವರು ಬಂದ ತಕ್ಷಣ ದೂರದಲ್ಲಿ ಚಪ್ಪಲಿ ಬಿಟ್ಟು, ಅವರಿಗೆ ಕೈ ಮುಗಿಯುವವರು ಮಾತ್ರ ರೈತರು” ಎಂದು ಟಾಂಗ್ ಕೊಟ್ಟಿದ್ದಾರೆ.

“ರೈತ ನಾಯಕಿ ಜಯಶ್ರೀ ಅವರನ್ನು ಎಲ್ಲಿ ಮಲಗಿದ್ದೆ ಇಷ್ಟು ದಿನ ಎಂದು ಕೇಳುತ್ತಿದ್ದಾರೆ. ಆದರೆ ಅವರು ಎಲ್ಲೋ ಮಲಗಿಕೊಂಡು ರೂಢಿಯಾಗಿ, ಯಾರ ಯಾರನ್ನೋ ಎಲ್ಲಿ ಮಲಗಿದ್ದೆ ಎಂದು ಕೇಳುತ್ತಿದ್ದಾರೆ. ಇವರ ಪಾಲಿಗೆ ರೈತರು ಎಂದರೇ, ಸಾಲಮನ್ನಾ ಮಾಡದೇ ಇದ್ದರೂ, ಕಬ್ಬಿಗೆ ಬೆಂಬಲ ಬೆಲೆ ನೀಡದೇ ಇದ್ದರೂ, ಇವರಿಗೆ ಕೈ ಮುಗಿಯುವವರು ಮಾತ್ರ ರೈತರು” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *