Connect with us

Crime

ರಸ್ತೆ ಹಂಪ್ ದಾಟುವಾಗ ಕೈತಪ್ಪಿ ಬೈಕಿನಿಂದ ಬಿದ್ದು ಮಗು ಸಾವು

Published

on

– ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಮಂಡ್ಯ: ಬೈಕಿನಲ್ಲಿ ಹೋಗುವಾಗ ಅಮ್ಮನ ಮಡಿಲಿನಲ್ಲಿ ಕೂತಿದ್ದ ಒಂದು ವರ್ಷದ ಮಗು ದಿಢೀರನೆ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯದ ಕಿರಂಗೂರು ಗ್ರಾಮದ ಬಳಿ ನಡೆದಿದೆ.

ಚಂದಗಾಲು ಗ್ರಾಮ ಶಿವಕುಮಾರ್ ಮತ್ತು ರಂಜಿತಾ ದಂಪತಿ ಮೃತ ಮಗುವಿನ ಪೋಷಕರಾಗಿದ್ದಾರೆ. ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ದಂಪತಿ ಮಗುವನ್ನು ಬೈಕಿನಲ್ಲಿ ಕೂರಿಸಿಕೊಂಡು ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಿರಂಗದೂರು ಗ್ರಾಮದ ಬಳಿಯ ಹಂಪ್ಸ್ ಬಳಿ ಶಿವಕುಮಾರ್ ತಮ್ಮ ಬೈಕನ್ನು ನಿಧಾನವಾಗಿ ಹಂಪ್ ಹತ್ತಿಸಿದ್ದಾರೆ. ರಂಜಿತಾ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದರು. ಬೈಕ್ ಹಂಪ್ಸ್ ಹತ್ತಿದ ವೇಳೆ ಮಗು ರಂಜಿತಾ ಅವರ ಕೈಯಿಂದ ಜಾರಿ ರಸ್ತೆಗೆ ಬಿದ್ದಿದೆ. ಈ ವೇಳೆ ಮಗು ತೀವ್ರವಾಗಿ ಗಾಯಗೊಂಡಿದೆ. ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಮಗು ಕೊನೆಯುಸಿರೆಳೆದಿದೆ.

ಮಗುವವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Click to comment

Leave a Reply

Your email address will not be published. Required fields are marked *