Connect with us

ಜೀವ ಇದ್ರೆ ಜೀವ ಇರುತ್ತದೆ, ಸರ್ಕಾರದ ಕಡ್ಡಾಯವಾಗಿ ಲಸಿಕೆ ಕೊಡಬೇಕು: ಡಿಕೆಶಿ

ಜೀವ ಇದ್ರೆ ಜೀವ ಇರುತ್ತದೆ, ಸರ್ಕಾರದ ಕಡ್ಡಾಯವಾಗಿ ಲಸಿಕೆ ಕೊಡಬೇಕು: ಡಿಕೆಶಿ

ಮಂಡ್ಯ: ಜೀವ ಇದ್ರೆ ಜೀವ ಇರುತ್ತದೆ. ಆದ್ದರಿಂದ ಸರ್ಕಾರದ ಕಡ್ಡಾಯವಾಗಿ ಲಸಿಕೆ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಮಾತಾಡಿದ ಅವರು, ಸರ್ಕಾರ ಮೊದಲಿಗೆ ಲಸಿಕೆ ತೆಗೆದುಕೊಳ್ಳಬೇಕು ಎಂದರೆ ಆನ್‍ಲೈನ್‍ನಲ್ಲಿ ನೋಂದಾಣಿ ಅಂತಾ ಹೇಳಿತ್ತು. ಇದೀಗ ದಿಢೀರನೇ ನಿಲ್ಲಿಸಿದೆ, ಬಡವರಿಗೆ ಲಸಿಕೆ ಸಿಗದಂತಹ ಸ್ಥಿತಿ ನಿರ್ಮಾವಾಗಿದೆ. ನಮ್ಮ ಎಂಎಲ್‍ಸಿ, ಎಂಎಲ್‍ಎ ಫಂಡ್‍ನಲ್ಲಿ ಲಸಿಗೆಗಾಗಿ 100 ಕೋಟಿ ಕೊಡುತ್ತೇವೆ ಎಂದು ಸರ್ಕಾರಕ್ಕೆ ಹೇಳಿದ್ದವು. ಆದರೆ ಇದುವರೆಗೂ ಸರ್ಕಾರದಿಂದ ನಮಗೆ ಅನುಮತಿ ಕೊಟ್ಟಿಲ್ಲ ಎಂದರು.

ಈ ವಿಚಾರದಲ್ಲಿ ಯಾರು ಸಹ ರಾಜಕೀಯ ಮಾಡಬಾರದು. ಜನರ ಜೀವ ಉಳಿಸುವ ಕೆಲಸವನ್ನು ಎಲ್ಲರೂ ಮಾಡೋಣ. ಸರ್ಕಾರಕ್ಕೆ ಜನರ ಜೀವ ಉಳಿಸಿ ಎಂದು ಭಿಕ್ಷೆ ಬೇಡುತ್ತಿದ್ದೇವೆ. ಸದ್ಯ ರಾಜ್ಯದಲ್ಲಿ 200 ಅಂಬುಲೆನ್ಸ್ ಗಳನ್ನು ನಾವು ಓಡಾಡಿಸುತ್ತಿದ್ದೇವೆ, ನಮ್ಮ ಕಾರ್ಯಕರ್ತರು ಜನರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ : ಡಿಕೆ ಶಿವಕುಮಾರ್

ಅಂತ್ಯಸಂಸ್ಕಾರಕ್ಕೆ ಜಾಗದ ಸಮಸ್ಯೆ ವಿಚಾರ ಸಂಬಂಧ ಮಾತಾನಾಡಿದ ಡಿಕೆಶಿ, ಅಶೋಕಣ್ಣನಿಗೆ ನಾನು ಈ ವಿಚಾರದ ಬಗ್ಗೆ ಮಾತಾನಾಡುವಾಗ ನಿನಗೆ ಕಾಮನ್ ಸೆನ್ಸ್ ಇಲ್ವಾ ಎಂದು ಹೇಳಿದ್ದೆ. ಸ್ಮಶಾನಕ್ಕಾಗಿ ಬೆಂಗಳೂರು ಸುತ್ತಮುತ್ತ ಜಾಗ ಹುಡುಕಿ ಅಂದ್ರೆ ಅವರಿಗೆ ಏನೋ ಕಥೆ ಕಟ್ಟುತ್ತಿದ್ದಾರೆ. ನಮಗೂ ಮನೆಯಿಂದ ಹೊರಬರಬೇಡಿ ಪರಿಸ್ಥಿತಿ ಸರಿ ಇಲ್ಲ ಎಂದು ಹೇಳ್ತಾ ಇದ್ದಾರೆ. ಆದರೆ ಭಯ ಬಿಟ್ಟು ಜನರ ಸೇವೆ ಮಾಡುತ್ತಿದ್ದೇವೆ, ಯಾವತ್ತಾದ್ರೂ ಒಂದು ದಿನ ಸಾಯಬೇಕಲ್ವಾ. ಜನರ ಸೇವೆ ಮಾಡಿ ದೇವರ ಪಾದಕ್ಕೆ ಹೋಗೋಣ ಎಂದು ಡಿಕೆಶಿ ಹೇಳಿದರು.

Advertisement
Advertisement