Sunday, 21st July 2019

ಸುಮಲತಾಗೆ ಸಿಎಂ ಎಚ್‍ಡಿಕೆ ಮಾಸ್ಟರ್ ಸ್ಟ್ರೋಕ್!

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ದಿನ ಕಳೆದಂತೆ ಸ್ಟಾರ್ ವಾರ್ ಜೋರಾಗುತ್ತಿದ್ದು, ಸುಮಲತಾ ಬೆಂಬಲ ಕೋರಿದ್ದವರನ್ನೇ ಸೆಳೆಯಲು ಸಿಎಂ ಮುಂದಾಗಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಸುಮಲತಾ ಅವರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಬಿ. ಶಿವಲಿಂಗಯ್ಯ ಅವರ ತಾವರೆಗೆರೆಯ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದರು. ಶಿವಲಿಂಗಯ್ಯ ಅವರು ಮಂಡ್ಯದ ಪ್ರಭಾವಿ ಬಿಜೆಪಿ ಮುಖಂಡರಾಗಿದ್ದು, ಕಳೆದೊಂದು ವಾರದ ಹಿಂದೆ ಸುಮಲತಾ ಅವರು ಶಿವಲಿಂಗಯ್ಯ ನಿವಾಸಕ್ಕೆ ಭೇಟಿ ನೀಡಿ ಬೆಂಬಲಕೋರಿದ್ದರು. ಈ ವೇಳೆ ಸುಮಲತಾ ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದರು.

ಸಿಎಂ ಕುಮಾರಸ್ವಾಮಿ ಅವರ ಭೇಟಿಯ ಬೆನ್ನಲ್ಲೇ ಶಿವಲಿಂಗಯ್ಯ ಅವರು ಜೆಡಿಎಸ್ ಸೇರ್ಪಡೆಯಾದ್ರು, ಸ್ವತಃ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಜೆಡಿಎಸ್ ಕೈ ಹಿಡಿದರು. ಆ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ದುಡಿಯುವವರ ಜೊತೆ ಕೈ ಜೋಡಿಸಲು ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಬಿಜೆಪಿ ಮೇಲೆ ಯಾರ ಮೇಲೂ ಬೇಸರವಿಲ್ಲ. ಈ ಹಿಂದೆ ಬಿಜೆಪಿ ಪಕ್ಷದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ನೀಡಿದ್ದಕ್ಕೆ ಧನ್ಯವಾದ ಎಂದರು ತಿಳಿಸಿದರು.

ಇತ್ತ ಕಾಂಗ್ರೆಸ್ ಮುಖಂಡ ಅಶೋಕ್ ಹಾಲಹಳ್ಳಿ ಬಡಾವಣೆಯ ನಿವಾಸಕ್ಕೂ ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ನಿಖಿಲ್, ತಂದೆಯವರಿದ್ದರೆ ನನಗೆ ಸ್ವಲ್ಪ ನಡುಕ. ಕ್ರಿಕೆಟ್‍ನಲ್ಲಿ ಸಚಿನ್ ತೆಂಡೂಲ್ಕರ್ ಇದ್ದಂತೆ ರಾಜಕೀಯದಲ್ಲಿ ನಮ್ಮ ತಂದೆ ಎಂದರು. ಮಗನ ಭಾಷಣ ವೇಳೆ ಎಚ್‍ಡಿಕೆ ಕೆಲವೊಂದು ಪದ ಹೇಳಿಕೊಟ್ಟರು.

Leave a Reply

Your email address will not be published. Required fields are marked *