Sunday, 22nd September 2019

ತಿಂಗಳ ಬಳಿಕ ಬಾವಿಯಲ್ಲಿ ಶವವಾಗಿ ಪತ್ತೆಯಾದ ಯುವತಿ

ಚಂಡೀಗಢ: ನಾಪತ್ತೆಯಾಗಿದ್ದ ಯುವತಿ ಒಂದು ತಿಂಗಳ ಬಳಿಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪಂಜಾಬ್ ರಾಜ್ಯದ ಜಲಂಧರ್ ಜಿಲ್ಲೆಯ ಹುಸೇನಬಾದ್ ಗ್ರಾಮದಲ್ಲಿ ನಡೆದಿದೆ.

ತಾನ್ಯ ಸಿಂಗ್ ಶವವಾಗಿ ಪತ್ತೆಯಾದ ಯುವತಿ. ಒಂದು ತಿಂಗಳ ಹಿಂದೆ ಬಟ್ಟೆ ಖರೀದಿಗೆಂದು ಮನೆಯಿಂದ ಹೊರ ಹೋಗಿದ್ದ ತಾನ್ಯ ಹಿಂದಿರುಗಿ ಬಂದಿರಲಿಲ್ಲ. ಒಂದು ತಿಂಗಳ ಬಳಿಕ ತಾನ್ಯ ಶವ ಗ್ರಾಮದ ಹೊರವಲಯದ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ತಾನ್ಯಳನ್ನು ಆಕೆಯ ಪ್ರಿಯಕರ ಕೊಲೆ ಮಾಡಿ ಬಾವಿಗೆ ಎಸೆದಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ತಾನ್ಯ ಮತ್ತು ಸುರ್ಜಿತ್ ಇಬ್ಬರ ನಡುವೆ ಪ್ರೇಮವಿತ್ತು ಎನ್ನಲಾಗುತ್ತಿದೆ. ಬಟ್ಟೆ ಖರೀದಿಗೆ ತೆರಳಿದ್ದ ತಾನ್ಯ ಗೆಳೆಯನನ್ನು ಭೇಟಿಯಾಗಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಸುರ್ಜಿತ್, ಗೆಳತಿಯ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಬಾವಿಗೆ ಎಸೆದು ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ. ತಾನ್ಯ ಕುಟುಂಬಸ್ಥರು ನಮಗೆ ನ್ಯಾಯ ಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *