Friday, 17th August 2018

Recent News

ಅಸಾಹಯಕ ಹೆಣ್ಮಕ್ಳೆ ಟಾರ್ಗೆಟ್ – ಒಂದು, ಎರಡಲ್ಲ, 4 ಮದ್ವೆಯಾದ!

ತುಮಕೂರು: ವ್ಯಕ್ತಿಯೊಬ್ಬ ಅಸಾಹಯಕ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದೇ ಕಾಯಕ ಮಾಡಿಕೊಂಡು ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ನಾಲ್ಕು ಮದುವೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶಿರಾ ಪಟ್ಟಣದ ಜ್ಯೋತಿನಗರದ ನಿವಾಸಿ ರಾಘವೆಂದ್ರ ನಾಲ್ಕು ಮದುವೆಯಾಗಿದ್ದಾನೆ. 39 ವರ್ಷದ ಈತ ಬಟ್ಟೆ ವ್ಯಾಪಾರಿಯಾಗಿದ್ದು, ಕಾಲೇಜು ಓದುತ್ತಿದ್ದಾಗ ಪ್ರೀತಿಯ ನಾಟಕವಾಡಿ ಶಿರ್ಶಿ ಮೂಲದ ಯುವತಿಗೆ ದೇವಸ್ಥಾನದಲ್ಲಿ ತಾಳಿಕಟ್ಟಿ ಬಳಿಕ ಒಂದಿಷ್ಟು ದಿನ ಸಂಸಾರ ಮಾಡಿ ಕೈ ಕೊಟ್ಟಿದ್ದಾನೆ.

2010 ರಲ್ಲಿ ಕಡೂರು ತಾಲೂಕಿನ ಜ್ಯೋತಿಯನ್ನು ಮದುವೆಯಾಗಿದ್ದಾನೆ. ಆದಾನಂತರ 2013 ರಲ್ಲಿ ಶಿರಾದ ಪಂಕಜಾ ಅವರ ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಮದುವೆಯಾಗಿ ಈಗ ಬಿಟ್ಟುಹೋಗಿದ್ದಾನೆ. ಅಷ್ಟೇ ಅಲ್ಲದೇ ಇದೇ ಶಿರಾ ಪಟ್ಟಣದ ನಿವಾಸಿ ಲತಾ ಜೊತೆ ನಾಲ್ಕನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾನೆ.

ಈ ಚಪಲ ಚೆನ್ನಿಗರಾಯನಿಂದ ಮೋಸ ಹೋದ ಮೊದಲು ಎರಡು ಪತ್ನಿಯರು ಇತನ ಸಹವಾಸವೇ ಬೇಡ ಎಂದು ಹೇಳಿ ಬೇರೆ ಮದುವೆಯಾಗಿದ್ದಾರೆ. ಆದರೆ ಮೂರನೇ ಪತ್ನಿ ಪಂಕಜಾ ತನಗಾದ ಅನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಸಾಯಕ ಹೆಣ್ಣುಮಕ್ಕಳ ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಬಡವರ ಬಾಳಲ್ಲಿ ಆಟ ಆಡುತಿದ್ದಾನೆ ಎಂದು ಮಹಿಳೆ ಆರೋಪಿಸುತ್ತಿದ್ದಾರೆ.

Leave a Reply

Your email address will not be published. Required fields are marked *