Sunday, 19th August 2018

ವಿಚ್ಛೇದನಕ್ಕೆ ಮೊದ್ಲೇ 2ನೇ ಮದ್ವೆಗೆ ತಯಾರು- ಕಲ್ಯಾಣ ಮಂಟಪಕ್ಕೆ ಪತ್ನಿ ಬರುತ್ತಿದ್ದಂತೆಯೇ ಪತಿ ಪೊಲೀಸರಿಗೆ ಶರಣು!

ದಾವಣಗೆರೆ: ಎರಡನೇ ಮದುವೆಯಾಗಲು ಮುಂದಾದ ಪತಿಯ ವಿವಾಹ ತಡೆಯಲು ಮೊದಲ ಪತ್ನಿ ಕಲ್ಯಾಣ ಮಂಟಪದತ್ತ ಧಾವಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ನಗರದ ನಿವಾಸಿ ಶ್ರೀದೇವಿ ಮತ್ತು ತೊಳಹುಣಸೆ ಗ್ರಾಮದ ಜಗದೀಶ್ ನಾಯ್ಕ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶ್ರೀದೇವಿಯೇ ಹಣ ಕೊಟ್ಟು ಜಗದೀಶ್ ಗೆ ಓದಿಸಿದ್ದರು. ಆದ್ರೆ, ಜಗದೀಶ್ ಶ್ರೀದೇವಿ ಜೊತೆ ವಿಚ್ಛೇದನ ಕೋರಿ ಕೋರ್ಟ್ ಗೆ ಹೋಗಿದ್ದನು.

ಆದ್ರೆ ಇದೀಗ ಮೊದಲ ಪತ್ನಿಯಿಂದ ವಿಚ್ಛೇದನ ಸಿಗುವುದಕ್ಕಿಂತ ಮುಂಚೆಯೇ ಮತ್ತೊಂದು ವಿವಾಹಕ್ಕೆ ಮಾಡಿಕೊಳ್ಳಲು ಸಜ್ಜಾಗಿದ್ದಾನೆ. ಜಗದೀಶ್ ತನ್ನ ಅಕ್ಕನ ಮಗಳನ್ನು ವಿವಾಹವಾಗಲು ಮುಂದಾಗಿದ್ದಾನೆ. ಹೀಗಾಗಿ ದಾವಣಗೆರೆ ನಗರದ ಆರ್.ಎಚ್.ಕಲ್ಯಾಣ ಮಂಟಪದಲ್ಲಿ ಇಂದು ವಿವಾಹ ನಡೆಯುತ್ತಿದ್ದು, ಈ ವಿಚಾರ ತಿಳಿದು ಪತ್ನಿ ನೇರವಾಗಿ ಮಂಟಪಕ್ಕೆ ತೆರಳಿದ್ದಾರೆ.

ಮೊದಲ ಪತ್ನಿ ಶ್ರೀದೇವಿ ಕಲ್ಯಾಣ ಮಂಟಪಕ್ಕೆ ಬಂದು ವಿವಾಹ ನಿಲ್ಲಿಸಲು ಮುಂದಾಗಿದ್ದಾರೆ. ಕಲ್ಯಾಣ ಮಂಟಪಕ್ಕೆ ಮೊದಲ ಪತ್ನಿ ಬರುತ್ತಿದ್ದಂತೆ ಜಗದೀಶ್ ಪೊಲೀಸರಿಗೆ ಶರಣಾಗಿದ್ದಾನೆ. ಅಲ್ಲದೇ ತನಗೆ ರಕ್ಷಣೆ ನೀಡುವಂತೆ ಕೋರಿ ಜಗದೀಶ್ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *