Connect with us

Districts

ಮನೆಯಿಂದ ಹೊರ ಬರ್ತಿದ್ದಂತೆ ಬಿದ್ದ ಮರ- ವ್ಯಕ್ತಿ ಸಾವು

Published

on

ಕಲಬುರಗಿ: ಮೈ ಮೇಲೆ ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕಲಬುರಗಿ ಹೊರವಲಯದಲ್ಲಿ ನಡೆದಿದೆ.

ಕಲಬುರಗಿ ಹೊರವಲಯದ ಸೆಂಟ್ರಲ್ ಜೈಲು ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ. ಗೋವಿಂದ ಚೌವಾಣ್ (41) ಮೃತ ದುರ್ದೈವಿ. ಮೃತ ಗೋವಿಂದ ಚೌವಾಣ್ ಕಾರಾಗೃಹದ ಡಿ.ಗ್ರೂಪ್ ಮಹಿಳಾ ಸಿಬ್ಬಂದಿ ಪಾರುಬಾಯಿ ಪತಿ ಎಂದು ತಿಳಿದು ಬಂದಿದೆ.

ಮೃತ ಗೋವಿಂದ ಚೌವಾಣ್ ಇಂದು ಬೆಳಗ್ಗೆ ಸುಮಾರು 5.30ಕ್ಕೆ ಕಸ ಚೆಲ್ಲಲು ಮನೆ ಹೊರಗೆ ಬಂದಿದ್ದಾರೆ. ಆಗ ಏಕಾಏಕಿ ಅವರ ಮೇಲೆ ಮೈ ಮೇಲೆ ಬಿದ್ದಿದೆ. ಬೃಹತ್ ಮರ ಬಿದ್ದ ಪರಿಣಾಮ ಚೌವಾಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಫರಹತ್ತಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.