Sunday, 25th August 2019

Recent News

86ರ ತಾಯಿ ಮೇಲೆ ಕಾಮುಕ ಮಗನಿಂದ ಲೈಂಗಿಕ ದೌರ್ಜನ್ಯ!

ಹೈದರಾಬಾದ್: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ 86 ವರ್ಷದ ವೃದ್ಧ ತಾಯಿ ಮೇಲೆ ಕುಡಿದ ಅಮಲಿನಲ್ಲಿದ್ದ ಮಗನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಕೃತ್ಯ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವುಯ್ಯುರು ಗ್ರಾಮದಲ್ಲಿ ನಡೆದಿದೆ.

ಶನಿವಾರದಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಗ ಶನಿವಾರ ರಾತ್ರಿ ಮನೆಗೆ ಕುಡಿದು ಬಂದಿದ್ದನು. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಕುಡಿದ ನಶೆಯಲ್ಲಿದ್ದ ಪಾಪಿ ಮಗ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆಯಿಂದ ಮನನೊಂದಿದ್ದ ತಾಯಿ ನೆರೆಹೊರೆಯವರ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. ನಂತರ ಅಕ್ಕಪಕ್ಕದ ಮನೆಯವರೇ ಮುಂದೆ ನಿಂತು ಪೊಲೀಸ್ ಠಾಣೆಗೆ ಆರೋಪಿ ಮೇಲೆ ದೂರು ನೀಡಿದ್ದಾರೆ.

ವೃದ್ಧೆಯ ಮೂರು ಮಕ್ಕಳ ಪೈಕಿ ಕಿರಿಯ ಮಗ ಈ ಅಟ್ಟಹಾಸ ಮೆರೆದಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಆರೋಪಿ ಈ ದುಷ್ಕೃತ್ಯವೆಸೆಗಿದ್ದಾನೆ. ಅಲ್ಲದೆ ತನ್ನ ಕುರಿತು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

ವೈದ್ಯರು ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಚಿತ ಪಡಿಸಿದ್ದು, ಸಂತ್ರಸ್ತೆ ನೀಡಿದ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸುತ್ತೇವೆ ಎಂದು ವುಯ್ಯುರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌  ಪಿ.ಕಾಶಿ ವಿಶ್ವನಾಥ್ ಅವರು ತಿಳಿಸಿದ್ದಾರೆ.

ಈ ಹಿಂದೆ ಕೂಡ ಇಂತಹದ್ದೆ ಘಟನೆಯೊಂದು ವುಯ್ಯುರು ಗ್ರಾಮದಲ್ಲಿ ನಡೆದಿತ್ತು. ಕಳೆದ ವರ್ಷ 20 ವರ್ಷದ ಯುವಕನೊಬ್ಬ 68 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *