Connect with us

Latest

ಪತ್ನಿ ಜೀನ್ಸ್ ಹಾಕಲ್ಲ, ಡ್ಯಾನ್ಸ್ ಮಾಡಲ್ಲ, ಹಾಡು ಹೇಳಲ್ಲವೆಂದು ತಲಾಖ್ ನೀಡಿದ ಪತಿ!

Published

on

– ಹೆಂಡ್ತಿ ತವರು ಮನೆಗೆ ಬಂದು ಬೆಂಕಿ ಹಚ್ಕೊಂಡ

ಲಕ್ನೋ: ಜೀನ್ಸ್ ತೊಡಲ್ಲ, ಡ್ಯಾನ್ಸ್ ಮಾಡಲ್ಲವೆಂದು ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಖ್ ನೀಡಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಹಾಪುರದ ಪಿಲ್ಖುವಾ ನಿವಾಸಿ ಅನಸ್ ಪತ್ನಿಗೆ ತಲಾಖ್ ನೀಡಿದ ಭೂಪ. ನಗರದ ಲಿಸಾರಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಇಸ್ಮಾಯಿಲ್ ನಗರದ ನಿವಾಸಿ ಅಮಿರುದ್ದೀನ್ ಅವರು 8 ವರ್ಷಗಳ ಹಿಂದೆ ತನ್ನ ಮಗಳನ್ನು ಅನಸ್ ಗೆ ಮದುವೆ ಮಾಡಿಕೊಟ್ಟಿದ್ದಾರೆ.

ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅನಸ್ ತನ್ನ ಪತ್ನಿಗೆ ಜೀನ್ಸ್ ಹಾಕುವಂತೆ ಒತ್ತಾಯಿಸುತ್ತಿದ್ದನು. ಅಲ್ಲದೆ ಡ್ಯಾನ್ಸ್ ಮಾಡು, ಹಾಡು ಹೇಳು ಎಂದೆಲ್ಲ ಕಿರುಕುಳ ನೀಡುತ್ತಿದ್ದನು. ಆದರೆ ಪತಿಯ ಈ ವರ್ತನೆಯನ್ನು ಪತ್ನಿ ಕಡೆಗಣಿಸುತ್ತಿದ್ದಳು. ಇದರಿಂದ ಸಿಟ್ಟಿಗೆದ್ದ ಅನಸ್, ಡಿಸೆಂಬರ್ 22ರಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.

ಪತ್ನಿಗೆ ತಲಾಖ್ ನೀಡಿದ ದಿನವೇ ಅನಸ್ ನೇರವಾಗಿ ಆಕೆಯ ತವರು ಮನೆಗೆ ಬಂದಿದ್ದಾನೆ. ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಪತ್ನಿ ಕುಟುಂಬಸ್ಥರು ಬೆಂಕಿ ನಂದಿಸುವ ಮೂಲಕ ಅನಸ್ ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in