Wednesday, 22nd May 2019

Recent News

ಬೀದರ್‌ನಲ್ಲಿ ಡಬಲ್ ಮರ್ಡರ್- ವಾಕಿಂಗ್ ಬಂದಿದ್ದ ಮಹಿಳೆಯರ ಭೀಕರ ಹತ್ಯೆ

ಬೀದರ್: ಬೆಳ್ಳಂಬೆಳಗ್ಗೆ ವಾಕಿಂಗ್‍ಗೆಂದು ಬಂದಿದ್ದ ಇಬ್ಬರು ಮಹಿಳೆಯರನ್ನು ದುಷ್ಕರ್ಮಿಯೊಬ್ಬ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶಾಹಗಂಜ್ ಪ್ರದೇಶದ ಹನುಮಾನ್ ಮಂದಿರ ಬಳಿ ನಡೆದಿದೆ.

ಲಲಿತಮ್ಮ (60) ಹಾಗೂ ದುರ್ಗಮ್ಮ (50) ಹತ್ಯೆಯಾದ ದುರ್ದೈವಿಗಳು. ಇಂದು ಬೆಳ್ಳಗ್ಗೆ ಎಂದಿನಂತೆ ಲಲಿತಮ್ಮ ಹಾಗೂ ದುರ್ಗಮ್ಮ ಜೊತೆಗೂಡಿ ವಾಕಿಂಗ್‍ಗೆಂದು ಶಾಹಗಂಜ್ ಬಳಿ ಬಂದಿದ್ದರು. ಈ ವೇಳೆ ಹನುಮಾನ್ ಮಂದಿರದ ಬಳಿ ಇದ್ದ ದುಷ್ಕರ್ಮಿಯೊಬ್ಬ ಇಬ್ಬರು ಮಹಿಳೆಯರಿಗೂ ದೊಣ್ಣೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಬೆಳಗಿನ ಜಾವ ಸುಮಾರು 4 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುವ ಆರೋಪಿಯು ಶನಿವಾರದಿಂದಲು ಹನುಮಾನ್ ಮಂದಿರದ ಬಳಿಯೆ ಇದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಹಿಳೆಯರನ್ನು ಕೊಲೆ ಮಾಡಲು ಕಾರಣವೇನು ಎಂದು ತಿಳಿದುಬಂದಿಲ್ಲ. ಮಹಿಳೆಯರ ಮೇಲೆ ಆರೋಪಿಗೆ ಹಳೇ ದ್ವೇಷವೇನಾದರು ಇರಬಹುದು ಅಥವಾ ಮಹಿಳೆಯರ ಬಳಿ ಧರಿಸಿದ್ದ ಚಿನ್ನಾಭರಣಕ್ಕಾಗಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ ಹತ್ಯೆ ಆರೋಪಿಯನ್ನು ನ್ಯೂಟೌನ್ ಪೊಲೀಸರು ಬಂಧಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *