Thursday, 21st February 2019

Recent News

ಪ್ರೇಯಸಿಯ ಕೊಚ್ಚಿ ಕೊಚ್ಚಿ ಕೊಂದು ಮಾಂಸವನ್ನು ಟಾಯ್ಲೆಟಲ್ಲಿ ಫ್ಲಷ್ ಮಾಡ್ದ!

ಮಾಸ್ಕೋ: ಪ್ರಿಯತಮೆ ತನ್ನ ಜೊತೆ ಬಂದು ವಾಸಿಸಲು ತಯಾರಾಗಿಲ್ಲ ಎಂದು ಸಿಟ್ಟಿಗೆದ್ದ ಕಾಮುಕನೊಬ್ಬ ತನ್ನ ಪ್ರೇಯಸಿಯನ್ನು ಕೊಂದಿದ್ದಾನೆ. ಕೊಂದ ಬಳಿಕ ಆತ ಮಾಡಿದ ಕೆಲಸಕ್ಕೆ ಆತನ ಸಂಬಂಧಿಕರೇ ಬೆಚ್ಚಿ ಬಿದ್ದಿದ್ದು, ಆತ ಇಷ್ಟು ಕ್ರೂರನಾಗಿದ್ದು ಹೇಗೆ ಎಂದು ಕೇಳುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ ಈತನಿಗೆ ಈ ಹಿಂದೆಯೇ ಮದುವೆಯಾಗಿ ಮಕ್ಕಳೂ ಇದ್ದಾರೆ. ಈ ಎಲ್ಲಾ ವಿಚಾರ ಮುಚ್ಚಿಟ್ಟು ಆತ ಇನ್ನೊಬ್ಬಳ ಜೊತೆ ಪ್ರೇಮದಾಟ ಶುರು ಮಾಡಿದ್ದನಂತೆ.

ಕೊಂದಿದ್ದು ಯಾಕೆ..?
ರಷ್ಯಾದ 36 ವರ್ಷದ ಡಿಮಿಟ್ರಿ ಝೆಲೆನ್ಸ್ಕಿ 27 ವರ್ಷನ ಟಾಟಿಯಾನಾ ಮೆಲೆಖಿನಾ ಎಂಬಾಕೆಯನ್ನು ಲವ್ ಮಾಡ್ತಿದ್ದ. ಅಲ್ಲದೆ ಆಕೆಯ ಜೊತೆ ಒಂದಾಗಿ ಬಾಳುವ ಕನಸನ್ನೂ ಬಿತ್ತಿದ್ದ. ಟಾಟಿಯಾನ ವಿದ್ಯಾಭ್ಯಾಸ ಮುಗಿದ ಬಳಿಕ ರಷ್ಯಾದ ಪೇಮ್ ನಗರದಲ್ಲಿ ನವ ಜೀವನ ಶುರು ಮಾಡಲು ಯೋಚಿಸಿದ್ದರು. ಹೀಗಾಗಿ ತನ್ನ ವಿದ್ಯಾಭ್ಯಾಸ ಮುಗಿಸಿದ ಬಳಿಕ ಟಾಟಿಯಾನಾ ಪೇಮ್ ನಗರಕ್ಕೆ ಬಂದಿದ್ದಾಳೆ. ಆದರೆ ಈ ಊರಿಗೆ ಬಂದಾಗ ಆಕೆಗೆ ಡಿಮಿಟ್ರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ನಾನು ಯಾವುದೇ ಕಾರಣಕ್ಕೂ ಪೇಮ್ ನಲ್ಲಿ ವಾಸ ಮಾಡಲ್ಲ ಎಂದು ಟಾಟಿಯಾನಾ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಡಿಮಿಟ್ರಿ ಆಕೆಯನ್ನು ಕೊಂದಿದ್ದಾನೆ.

ಮಾಂಸ, ಮೂಳೆ ಬೇರ್ಪಡಿಸಿ ಪುಡಿ ಪುಡಿ ಮಾಡ್ದ!
ಪ್ರಿಯತಮೆಯ ವರ್ತನೆಯಿಂದ ಸಿಟ್ಟಿಗೆದ್ದ ಈತ ಪ್ರಿಯತಮೆಯನ್ನು ಕೊಂದಿದ್ದೇನೋ ಆಯ್ತು. ಆದರೆ ಕೊಲೆ ಮಾಡಿದ ವಿಚಾರ ಹೊರಜಗತ್ತಿಗೆ ಗೊತ್ತಾಗಬಾರದಲ್ಲ. ಅದಕ್ಕಾಗಿ ಹೊಸ ಪ್ಲ್ಯಾನ್ ಮಾಡ್ದ. ಪ್ರಿಯತಮೆಯ ಅಂಗಾಂಗಗಳನ್ನು ಕೊಚ್ಚಿ ಕೊಚ್ಚಿ ಕಟ್ ಮಾಡಿದ ಆತ ಅದರಿಂದ ಮೂಳೆ ಹಾಗೂ ಮಾಂಸವನ್ನು ಬೇರ್ಪಡಿಸಿದ. ಇಲ್ಲಿಗೇ ಈತನ ವಿಕೃತಿ ಮುಗಿಯಲಿಲ್ಲ. ಹೇಗಿದ್ದರೂ ತಾನವಳ ಮೃತದೇಹ ಹೊರಗಡೆ ಸಾಗಿಸಲು ಸಾಧ್ಯವಿಲ್ಲ ಎಂದು ಅರಿತಿದ್ದ ಆತ ಆ ಮಾಂಸಗಳನ್ನು ಮತ್ತೆ ಕೊಚ್ಚಿ ಪುಡಿ ಪುಡಿ ಮಾಡಿದ. ಬಳಿಕ ಆ ಮಾಂಸದ ಮುದ್ದೆಯನ್ನು ಟಾಯ್ಲೆಟ್ ನ ಕಮೋಡ್ ಗೆ ಹಾಕಿ ಫ್ಲಷ್ ಮಾಡಿದ್ದಾನೆ. ಬಳಿಕ ಆಕೆಯ ಎಲುಬನ್ನು ಚೂರು ಚೂರು ಮಾಡಿ ಮೀನುಗಳಿಗೆ ಆಹಾರವಾಗಲಿ ಎಂದು ನದಿಗೆಸೆದಿದ್ದಾನೆ. ಆದರೆ ಯಾವಾಗ ಟಾಟಿಯಾನಾಳ ತಂದೆ ಪೊಲೀಸರಿಗೆ ದೂರು ನೀಡಿದರೋ ತನಿಖೆ ಶುರುವಾಗಿದೆ. ಇದರ ವಿಚಾರಣೆ ಆರಂಭಿಸಿದ ಪೊಲೀಸರು ನೇರವಾಗಿ ಬಂದು ಡಿಮಿಟ್ರಿ ಮನೆ ಬಾಗಿಲು ಬಡಿದಿದ್ದಾರೆ.

ಬರಲಿಲ್ಲ ಫೋನು, ಮಾಡಿದ್ರು ಕಂಪ್ಲೇಂಟು!
ಯಾವಾಗ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಶುರು ಮಾಡಿದರೋ ಡಿಮಿಟ್ರಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ್ದು ಯಾರಿಗೂ ಗೊತ್ತಾಗದೇ ಇರಲಿ ಎಂದು ಮಾಂಸವನ್ನು ಪುಡಿ ಪುಡಿ ಮಾಡಿ ಟಾಯ್ಲೆಟ್ ಗೆ ಹಾಕಿದ್ದೇನೆ. ಮೂಳೆಗಳನ್ನು ನದಿಗೆ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಮನೆಯಿಂದ ಹೊರಟಿದ್ದ ಟಾಟಿಯಾನಾ ನಾನು ಪೇಮ್ ತಲುಪುತ್ತಿದ್ದಂತೆ ಫೋನ್ ಮಾಡುತ್ತೇನೆ ಎಂದು ಅಪ್ಪನಿಗೆ ಮಾತು ಕೊಟ್ಟಿದ್ದಾಳೆ. ಆದರೆ ಮಗಳ ಫೋನ್ ಕಾಲ್ ಬಾರದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾದ ಅಪ್ಪ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದಾರೆ.

ಡಿಮಿಟ್ರಿ ಈಗಾಗಲೇ ಮದುವೆಯಾಗಿದ್ದವಳ ಹೆಸರೂ ಟಾಟಿಯಾನಾ. ಸ್ಥಳೀಐ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ನಾವಿಬ್ಬರೂ ಬೇರೆ ಬೇರೆಯಾಗೇ ವಾಸ ಮಾಡುತ್ತಿದ್ದೆವು. ಆದರೆ ಡೈವೋರ್ಸ್ ಆಗಿರಲಿಲ್ಲ. ಆತ ಇಷ್ಟೊಂದು ಕ್ರೂರಿ ಎಂದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಡಿಮಿಟ್ರಿ ಪೊಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply

Your email address will not be published. Required fields are marked *