Connect with us

Crime

ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

Published

on

ಲಕ್ನೋ: ರಂಜಾನ್‍ನ ಇಫ್ತಾರ್ ಪಾರ್ಟಿಗೆ ಆಹ್ವಾನಿಸಿಲ್ಲ ಎಂದು ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಮಕ್ಕಳನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ.

ಆಸ್ಮಾ, ಅಲೀಮಾ ಮೋಹೆ ಹಾಗೂ ಅಬ್ದುಲ್ಲಾ ಮೃತ ದುರ್ದೈವಿಗಳು. ಮೂವರು ಮಕ್ಕಳು 7ರಿಂದ 8 ವರ್ಷದವರು ಎಂದು ಹೇಳಲಾಗಿದ್ದು, ಇವರ ಕುಟುಂಬದವರು ಶುಕ್ರವಾರ ಇಫ್ತಾರ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಗೆ ತನ್ನನ್ನು ಆಹ್ವಾನಿಸಿಲ್ಲ ಎಂದು ಬೇಸರದಿಂದ ವ್ಯಕ್ತಿ ಮೂವರು ಮಕ್ಕಳನ್ನು ಕೊಲೆ ಮಾಡಿದ್ದಾನೆ.

ವ್ಯಕ್ತಿ ಬೇಸರದಿಂದ ಮೂವರನ್ನು ಮಕ್ಕಳನ್ನು ಗುಂಡಿಕ್ಕಿ ಕೊಲೆ ಮಾಡಿದಲ್ಲದೇ ಅವರ ಮೃತದೇಹವನ್ನು ದುತೂರಿ ಗ್ರಾಮದ ಅರಣ್ಯದಲ್ಲಿದ್ದ ಬಾವಿಯಲ್ಲಿ ಎಸೆದಿದ್ದನು. ಮಕ್ಕಳು ಕಾಣಿಸದೇ ಇದ್ದಾಗ ಪೋಷಕರು ಶುಕ್ರವಾರ ರಾತ್ರಿ ಸುಮಾರು 9.22ಕ್ಕೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು 100ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಹಾಗೂ ದೂರು ಕೂಡ ದಾಖಲಿಸಿಲ್ಲ. ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಧೃವ್ ಭುಷಣ್ ದುಬೆ ಹಾಗೂ ಮುಂಶಿಯ ಎಸ್‍ಎಸ್‍ಪಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.