Connect with us

Crime

7 ಹಸುಗಳ ಮೇಲೆ ಅತ್ಯಾಚಾರವೆಸೆಗಿದ ಕಾಮುಕ!

Published

on

– ಸ್ವಯಂಸೇವಕರಿಂದ ಧರ್ಮದೇಟು

ಅಯೋಧ್ಯೆ: ಮದ್ಯದ ಅಮಲಿನಲ್ಲಿದ್ದ ಕಾಮುಕನೊಬ್ಬ ಗೋಶಾಲೆಯಲ್ಲಿದ್ದ ಹಸುಗಳ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಕೃತ್ಯ ಅಯೋಧ್ಯೆ ನಗರದ ಕರ್ತಾಲಿಯ ಬಾಬಾ ಆಶ್ರಮದ ಗೋಶಾಲೆಯಲ್ಲಿ ನಡೆದಿದೆ.

ಆರೋಪಿಯ ಹೆಸರು ರಾಜ್‍ಕುಮಾರ್ ಎಂಬುದು ತಿಳಿದು ಬಂದಿದೆ. ಆದರೆ ಆತನ ಇತರೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕುಡಿದ ಅಮಲಿನಲ್ಲಿ ಆಶ್ರಮಕ್ಕೆ ಬರುತ್ತಿದ್ದ ಕಾಮುಕ ಗೋಶಾಲೆಯಲ್ಲಿದ್ದ ಏಳು ಹಸುಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಕೃತ್ಯವು ಗೋಶಾಲೆಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಆಶ್ರಮ ಸಿಬ್ಬಂದಿ ಹಾಗೂ ಸ್ವಯಂಸೇವಕರು ಕಾಮುಕನನ್ನು ಹಿಡಿಯಬೇಕು ಎಂದು ಗೋಶಾಲೆ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಇದೇ ವೇಳೆ ಮತ್ತೆ ಕಾಮುಕ, ಹಸುಗಳ ಮೇಲೆ ಅತ್ಯಾಚಾರವೆಸಗಲು ಬಂದಾಗ ಆಶ್ರಮದ ಸ್ವಯಂಸೇವಕರು ಆತನನ್ನು ಹಿಡಿದು ಸಖತ್ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 511ರ ಪ್ರಾಣಿಗಳ ವಿರುದ್ಧ ಕ್ರೌರ್ಯ ನಡೆಸುವ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಯು ವಿಚಾರಣೆ ವೇಳೆ ತಾನು ಕುಡಿದ ಮತ್ತಿನಲ್ಲಿ ಏನು ಮಾಡಿದೆ ಎಂದು ಗೊತ್ತಿಲ್ಲ. ಆದರೆ ಜನ ನನ್ನನ್ನು ಹೊಡೆದಿರುವುದು ಮಾತ್ರ ನೆನಪಿದೆ ಎಂದು ಹೇಳಿದ್ದಾನೆ.