Connect with us

Crime

ಅಂಗವಿಕಲ ಸಹೋದರನ ತಲೆಯನ್ನು ರುಬ್ಬುವ ಕಲ್ಲಿನಿಂದ ಚಚ್ಚಿ ಕೊಂದ!

Published

on

– ಕುಡಿದ ಮತ್ತಿನಲ್ಲಿ ಅಣ್ಣನ ಕೊಲೆಗೈದ

ಮುಂಬೈ: ಅಣ್ಣನ ತಲೆಯನ್ನು ತಮ್ಮನೇ ರುಬ್ಬುವ ಕಲ್ಲಿನಿಂದ ಚಚ್ಚಿ ಕೊಂದಿರುವ ಘಟನೆ ನಡೆದಿದೆ. ಸಹೋದರನನ್ನು ಕೊಂದ ಆರೋಪದ ಮೇಲೆ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸುನಿಲ್ ತಂಬೆ(47) ಎಂದು ಗುರುತಿಸಲಾಗಿದ್ದು, ಈತ ಸಹೋದರ ಸುಧೀರ್ ಖಾರ್(50)ನನ್ನು ಕೊಲೆ ಮಾಡಿದ್ದಾನೆ. ಈ ಸಹೋದರರು ದಂಡಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

ಕೊಲೆಯಾದ ಸುಧೀರ್ ಪತ್ನಿ ಹೇಳುವುದು ಏನು?:
ಸುಧೀರ್ ಒಬ್ಬ ಅಂಗವಿಕಲನಾಗಿದ್ದು, ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಕ್ಟೋಬರ್ 18 ರಂದು ಸುಮಾರು ರಾತ್ರಿ 10 ಗಂಟೆ ಸಮಯದಲ್ಲಿ ಕುಡಿದು ಮನೆಗೆ ಬಂದಿದ್ದ ಸುನೀಲ್ ಏಕಾಏಕಿ ಸುಧೀರ್ ಮೇಲೆ ರೇಗಾಡಿದ್ದಾನೆ. ಸುನಿಲ್ ಮನೆಯವರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಿರಲಿಲ್ಲ. ಬದಲಾಗಿ ಜಗಳಕ್ಕೆ ಇಳಿದು ಬಿಡುತ್ತಿದ್ದ ಎಂದು ಕೊಲೆಯಾದ ಸುಧೀರ್ ಪತ್ನಿ ಅಂಜಲಿ ಪೊಲೀಸರಿಗೆ ತಿಳಿಸಿದ್ದಾಳೆ.

ಕೊಲೆಯ ಹಿನ್ನೆಲೆ ಏನು?:
ಸೋದರರಿಬ್ಬರ ನಡುವೆ ನಡೆದ ಸಣ್ಣ ಜಗಳ ಅತಿರೇಕದತ್ತ ತೆರಳಿದೆ. ಸುಧೀರ್ ಮೇಲೆ ಕೋಪೋದ್ರಿಕ್ತನಾದ ಸುನೀಲ್, ರುಬ್ಬುವ ಕಲ್ಲು ಎತ್ತಿಕೊಂಡು ಸುಧೀರ್ ಮಾತನ್ನು ಕೇಳದಿದ್ದರೆ ಮತ್ತು ರೇಗಾಡುವುದನ್ನು ನಿಲ್ಲಿಸದಿದ್ದರೆ ಹೊಡೆಯುತ್ತೇನೆ ಎಂದು ಸುನಿಲ್ ಎಚ್ಚರಿಸಿದ್ದಾನೆ. ಸುಧೀರ್ ಮಾತು ಕೇಳದೆ ಇನ್ನಷ್ಟು ಜಗಳಕ್ಕೆ ಇಳಿದಾಗ ಸುನೀಲ್, ಸುಧೀರ್‍ನ ತಲೆಗೆ ರುಬ್ಬುವ ಕಲ್ಲಿನಿಂದ ಚಚ್ಚಿದ್ದಾನೆ. ಪರಿಣಾಮ ಸುಧೀರ್ ತಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಲು ಪ್ರಾರಂಭವಾಗಿದೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಖಾರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಗಜಾನನ್ ಕಬ್ದುಲೆ ತಿಳಿಸಿದ್ದಾರೆ.

ಸುಧೀರ್ ಗೆ ಚಿಕಿತ್ಸೆ ನೀಡುತ್ತಿದ್ದ ಆರಂಭಿಕ ನಾಲ್ಕು ದಿನಗಳ ಅವಧಿಯಲ್ಲಿ ಸುಧೀರ್ ಆರೋಗ್ಯ ಚೆನ್ನಾಗಿತ್ತು. ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಿದ್ದನು. ಆದರೆ ಐದನೇ ದಿನ ಮಾತನಾಡಲು ಸಾಧ್ಯವಾಗಲಿಲ್ಲ. ಸುಧೀರ್ ಕೋಮಾ ಸ್ಥಿತಿಗೆ ಹೋಗಿದ್ದನು. ಅಕ್ಟೋಬರ್ 28 ರಂದು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸುಧೀರ್ ಸಾವನ್ನಪ್ಪಿದ್ದಾನೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ (326) ಸ್ವಯಂಪ್ರೇರಣೆಯಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ಸಾಧನಗಳಿಂದ ತೀವ್ರವಾಗಿ ನೋವನ್ನುಂಟುಮಾಡುತ್ತದೆ ಮತ್ತು (302) ಕೊಲೆ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಹಿರಿಯ ಇನ್ಸ್ ಪೆಕ್ಟರ್ ಗಜಾನನ್ ಕಬ್ದುಲೆ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *