
ಎಲ್ಲ ಹುಡುಗರಿಗೂ ಸಿಕ್ಸ್ ಪ್ಯಾಕ್ ಮಾಡಬೇಕು, ಬಾಡಿ ಬಿಲ್ಡ್ ಮಾಡಬೇಕು ಎಂಬ ಕನಸು ಇರುತ್ತೆ. ಅದಕ್ಕಾಗಿ ತುಂಬಾ ತಿಂಗಳು ಕಷ್ಟ ಪಡಬೇಕು. ಆದರೆ ಇಲ್ಲೊಬ್ಬ ವ್ಯಕ್ತ ಕೇವಲ ಎರಡೇ ದಿನಗಳಲ್ಲಿ ಸಿಕ್ಸ್ ಪಡೆದು ನೆಟ್ಟಿಗರಿಗೆ ಅಚ್ಚರಿ ಉಂಟು ಮಾಡಿದ್ದಾನೆ. ಏನಿದು ಎರಡೇ ದಿನಗಳಲ್ಲಿ ಸಿಕ್ಸ್ ಪ್ಯಾಕ್ ಪಡೆಯುವುದಕ್ಕೆ ಸಾಧ್ಯನಾ ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ವೀಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಇಲ್ಲೊಬ್ಬ ವ್ಯಕ್ತಿಗೆ ಯಾವುದೇ ರೀತಿಯ ವರ್ಕೌಟ್ ಮಾಡದೆ ಸರಳವಾಗಿ ಸಿಕ್ಸ್ ಪಡೆಯಬೇಕು ಎಂಬ ಕನಸಿತ್ತು. ಮೊದಲ ದಿನ ವರ್ಕೌಟ್ ಮಾಡಿದ್ರೂ ಅಪ್ಸ್ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರಿಲ್ಲ. ಈ ಹಿನ್ನೆಲೆ ಯೋಚಿಸಿದ ಆತ, ಟ್ಯಾಟೂ ಹಾಕುವವರ ಬಳಿ ಹೋಗಿದ್ದಾನೆ. ಅವರಿಗೆ ಸಿಕ್ಸ್ ಪ್ಯಾಕ್ ಟ್ಯಾಟೂ ಹಾಕುವಂತೆ ಕೇಳಿಕೊಂಡಿದ್ದಾನೆ. ಈ ಹಿನ್ನೆಲೆ ಅವರು ಸಹ ಸಿಕ್ಸ್ ಪ್ಯಾಕ್ ರೀತಿಯಲ್ಲಿಯೇ ಟ್ಯಾಟೂ ಹಾಕಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಹತ್ತಿದ್ದ ಮಹಿಳೆ ಪ್ರಾಣ ಉಳಿಸಿದ ಕಣಜಗಳು
ಈ ವೀಡಿಯೋವನ್ನು ಗುಂಥರ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು, ನನ್ನ ಬಳಿ ಬಂದ ಒಬ್ಬ ವ್ಯಕ್ತಿಗೆ ಸಿಕ್ಸ್ ಪ್ಯಾಕ್ ಬೇಕಿತ್ತು. ಅದಕ್ಕೆ ಈ ಟ್ಯಾಟೂ. ನಿಮ್ಮ ಬಳಿ ಮಂತ್ರದಂಡ ಇದ್ದಾಗ ಯಾರಿಗೆ ಜಿಮ್ ಬೇಕು. 2 ದಿನಗಳಲ್ಲಿ 6 ಪ್ಯಾಕ್! ಆನಂದಿಸಿ! ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಟ್ಯಾಟೂ ಹಾಕಲು ಇವರು ಸುಮಾರು 2 ದಿನ ತೆಗೆದುಕೊಂಡಿದ್ದಾರೆ. ಆದರೂ ಗುಂಥರ್, ಏನೇ ಆದರೂ ಜಿಮ್ ಬಿಡಬೇಡಿ ಎಂದು ಹೇಳಿದ್ದಾರೆ. ಈ ವೀಡಿಯೋ ಮತ್ತು ಫೋಟೋ ನೋಡಿದ ನೆಟ್ಟಿಗರು, ವ್ಹಾವ್ ಸೂಪರ್ ವರ್ಕ್, ಇದು ಅದ್ಭುತವಾಗಿ ಕಾಣುತ್ತಿದೆ. ಇದು ನಿಮ್ಮ ಕ್ಲೈಂಟ್ಗೆ ವಿಶ್ವಾಸವನ್ನು ನೀಡಿದೆ. ಈ ಅದ್ಭುತ ಕೆಲಸವನ್ನು ಮುಂದುವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ!
ಟ್ಯಾಟೂವನ್ನು ಉತ್ತಮವಾಗಿ ಹಾಕಿದ್ದೀರಾ. ನಿಮ್ಮ ಈ ಕಲ್ಪನೆ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.