Monday, 19th August 2019

ಮದ್ವೆಯಾದ 24 ಗಂಟೆಯೊಳಗೆ ಪತ್ನಿಗೆ ತಲಾಖ್ ಕೊಟ್ಟ

ಲಕ್ನೋ: ಪತಿಯೊಬ್ಬ ಮದುವೆಯಾದ 24 ಗಂಟೆಯೊಳಗೆ ತನ್ನ ಪತ್ನಿಗೆ ತಲಾಖ್ ಕೊಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಉಸ್ಮಾನ್ ಗನಿ ತಲಾಖ್ ಕೊಟ್ಟ ಪತಿ. ಜುಲೈ 13ರಂದು ಉಸ್ಮಾನ್ ಗನಿ, ಹಸನಪುರ ತಾಂಡಾದ ನಿವಾಸಿಯಾದ ಖುತುಬುದ್ದೀನ್ ಅವರ ಮಗಳು ರುಕ್ಸಾನಾರನ್ನು ಮದುವೆ ಆಗಿದ್ದನು. ಶನಿವಾರ ಮದುವೆ ಆದ ಬಳಿಕ ರುಕ್ಸಾನಾ ಕುಟುಂಬದವರು ವರದಕ್ಷಿಣೆ ನೀಡಿ ಮಗಳಿಗೆ ತನ್ನ ಪತಿಯ ನಿವಾಸಕ್ಕೆ ಕಳುಹಿಸಿಕೊಟ್ಟರು.

ಭಾನುವಾರ ರುಕ್ಸಾನಾ ಕುಟುಂಬದವರು ಯಾವುದೋ ಶಾಸ್ತ್ರಕ್ಕೆ ಎಂದು ತನ್ನ ಮಗಳಿಗೆ ಮನೆಗೆ ಕರೆದುಕೊಂಡು ಬರಲು ಸಿದ್ಧವಾಗಿದ್ದರು. ಈ ವೇಳೆ ಉಸ್ಮಾನ್ ಮನೆಯವರು ಖುತುಬುದ್ದೀನ್ ಅವರಿಗೆ ಕರೆ ಮಾಡಿ ರುಕ್ಸಾನಾ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದ್ದರು.

ರುಕ್ಸಾನಾ ಆರೋಗ್ಯ ವಿಚಾರಿಸಲೆಂದು ಖುತುಬುದ್ದೀನ್ ಆಕೆಯ ಪತಿಯ ಮನೆಗೆ ತೆರಳಿದ್ದರು. ಈ ವೇಳೆ ರುಕ್ಸಾನಾ ಪತಿ ಉಸ್ಮಾನ್ ಹಾಗೂ ಆತನ ಕುಟುಂಬಸ್ಥರು ಬೈಕನ್ನು ವರದಕ್ಷಿಣೆಯಾಗಿ ನೀಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ತಂದೆ ಬಳಿ ತನ್ನ ನೋವನ್ನು ತೊಡಿಕೊಂಡಿದ್ದಾಳೆ.

ಬಳಿಕ ರುಕ್ಸಾನಾ ಕುಟುಂಬದವರು ಉಸ್ಮಾನ್ ಹಾಗೂ ಆತನ ಮನೆಯವರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಖುತುಬುದ್ದೀನ್ ಅವರ ಮಾತು ಕೇಳದೇ ಉಸ್ಮಾನ್ ಎಲ್ಲರ ಮುಂದೆ ರುಕ್ಸಾನಾಗೆ ತಲಾಖ್ ನೀಡಿದ್ದಾನೆ. ಮದುವೆಯಾಗಿ 24 ಗಂಟೆಯೊಳಗೆ ಮಗಳಿಗೆ ತಲಾಖ್ ಕೊಟ್ಟಿದ್ದಕ್ಕೆ ಖುತುಬುದ್ದೀನ್ ಹಾಗೂ ಕುಟುಂಬಸ್ಥರು ದುಃಖದಲ್ಲಿದ್ದಾರೆ.

ಈ ಬಗ್ಗೆ ಖುತುಬುದ್ದೀನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *