Connect with us

Corona

ಕೊರೊನಾದಿಂದ ಕಾರವಾರದ ವ್ಯಕ್ತಿ ಕುವೈತ್‍ನಲ್ಲಿ ಸಾವು

Published

on

ಕಾರವಾರ: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕೊರೊನಾ ವೈರಸ್‍ನಿಂದಾಗಿ ಕಾರವಾರ ಮೂಲದ ನಿವಾಸಿ ಕುವೈತ್‍ನಲ್ಲಿ ಸಾನ್ನಪ್ಪಿದ್ದಾರೆ.

ಕಾರವಾರದ ಸದಾಶಿವಗಡ ನಿವಾಸಿ ಸುಶಾಂತ್ ಕಡವಾಡಕ್ಕರ್ (40) ಮೃತ ವ್ಯಕ್ತಿ. ಸುಶಾಂತ್ ಕಡವಾಡಕ್ಕರ್ ಸುಮಾರು 9 ತಿಂಗಳ ಹಿಂದೆ ಕುವೈತ್‍ಗೆ ತೆರಳಿದ್ದರು. ಕೆಲವು ದಿನಗಳ ಹಿಂದೆ ಜ್ವರದ ಹಿನ್ನೆಲೆಯಲ್ಲಿ ಕುವೈತ್‍ನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಕುವೈತ್‍ನಲ್ಲಿ ಇವರ ಗಂಟಲು ದ್ರವ ಪರೀಕ್ಷೆ ಸಹ ಮಾಡಲಾಗಿತ್ತು. ಈ ವೇಳೆ ಕೊರೊನಾ ಸೊಂಕು ಇರುವುದು ಪತ್ತೆಯಾಗಿದೆ. ನಂತರ ಸುಶಾಂತ್ ಕಡವಾಡಕ್ಕರ್ ಕೆಲವು ದಿನಗಳಿಂದ ಕುವೈತ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆದರೆ ತೀವ್ರ ಉಸಿರಾಟದ ಸಮಸ್ಯೆ ಉಲ್ಭಣಿಸಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದೆ. ಆದರೆ ಜಿಲ್ಲಾಡಳಿತಕ್ಕೆ ಇದುವರಿಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.