ಬಲವಂತವಾಗಿ ದನದ ಮಾಂಸ ತಿನ್ನಿಸಿದ ಮುಸ್ಲಿಂ ಪತ್ನಿ, ಆಕೆಯ ಸಹೋದರ- ವ್ಯಕ್ತಿ ಆತ್ಮಹತ್ಯೆ

Advertisements

ಗಾಂಧೀನಗರ: ಪತ್ನಿ ಹಾಗೂ ಬಾವ ಸೇರಿ ಬಲವಂತದಿಂದ ದನದ ಮಾಂಸ ತಿನ್ನಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿ ಸೂರತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisements

ಜೂನ್‍ನಲ್ಲಿ ಎರಡು ತಿಂಗಳ ಹಿಂದೆ ರೋಹಿತ್ ಪ್ರತಾಪ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಫೇಸ್‍ಬುಕ್‍ನಲ್ಲಿ ಡೆತ್ ನೋಟ್‍ನ್ನು ಬರೆದಿಟ್ಟು, ನೇಣು ಹಾಕಿಕೊಂಡಿದ್ದರು. ಈ ಡೆತ್ ನೊಟ್‍ನ ಬಗ್ಗೆ  ಎರಡು ತಿಂಗಳ ನಂತರ ಅರಿತ ಆತನ ಕುಟುಂಬಸ್ಥರು ಸೂರತ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪತ್ನಿ ಸೋನಮ್ ಅಲಿ ಹಾಗೂ ಆಕೆಯ ಸಹೊದರ ಅಖ್ತರ್ ಅಲಿ ವಿರುದ್ಧ ದೂರು ನೀಡಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಿಸಿ ಸೂರತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisements

ರೋಹಿತ್ ಬರೆದ ಡೆತ್ ನೋಟ್‍ನಲ್ಲಿ ಏನಿತ್ತು?: ದನದ ಮಾಂಸ ತಿನ್ನಲು ನಿರಾಕರಿಸಿದ್ದೆ. ಆದರೆ ನನ್ನ ಪತ್ನಿ ಸೋನಮ್ ಅಲಿ ಹಾಗೂ ಆಕೆಯ ಸಹೋದರ ಅಖ್ತರ್ ಅಲಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ನನಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿದ್ದಾರೆ. ಹೀಗಾಗಿ ನಾನು ಬದುಕಲು ಅರ್ಹನಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ಸಾವಿಗೆ ನ್ಯಾಯ ಕೊಡಿಸುವಂತೆ ಎಲ್ಲ ಸ್ನೇಹಿತರಲ್ಲೂ ವಿನಂತಿಸಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

ರೋಹಿತ್, ಸೋನಮ್ ಭೇಟಿ: ರೋಹಿತ್ ಪ್ರತಾಪ್ ಸಿಂಗ್ ಮತ್ತು ಸೋನಮ್ ಸೂರತ್ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅಲ್ಲೇ ಇಬ್ಬರಿಗೂ ಪರಿಚಯವಾಗಿ ಸ್ನೇಹಿತರಾಗಿದ್ದರು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಆಗಲು ಬಯಸಿದ್ದರು. ಆದರೆ ಸೋನಮ್ ಬೇರೆ ಧರ್ಮಕ್ಕೆ ಸೇರಿದ್ದ ಕಾರಣ ಅವರ ಸಂಬಂಧವನ್ನು ರೋಹಿತ್ ಕುಟುಂಬಸ್ಥರು ನಿರಾಕರಿಸಿದ್ದರು. ಆದರೆ ರೋಹಿತ್ ಮನೆಯವರ ವಿರೋಧದ ನಡುವೆ ಸೋನಮ್‍ನನ್ನು ಮದುವೆಯಾಗಿದ್ದರು. ವರದಿಗಳ ಪ್ರಕಾರ ಕಳೆದೊಂದು ವರ್ಷದಿಂದ ರೋಹಿತ್ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಇದನ್ನೂ ಓದಿ: ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

Advertisements

ಇದರಿಂದಾಗಿ ಕುಟುಂಬಸ್ಥರಿಗೆ ರೋಹಿತ್ ಫೇಸ್‍ಬುಕ್‍ನಲ್ಲಿ ಡೆತ್ ನೋಟ್ ಬರೆದ ವಿಷಯ ತಿಳಿದಿರಲಿಲ್ಲ. ಈ ಬಗ್ಗೆ ಸ್ನೇಹಿತರು ರೋಹಿತ್ ಕುಟುಂಬಸ್ಥರಿಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರೋಹಿತ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಸಾಮೂಹಿಕ ನಮಾಜ್ – 26 ಮಂದಿಯ ವಿರುದ್ಧ ಪ್ರಕರಣ ದಾಖಲು

Live Tv

Advertisements
Exit mobile version