Advertisements

ಆರೋಪಿಯೂ ಅಲ್ಲ, ಕೈದಿಯೂ ಅಲ್ಲ- 5 ವರ್ಷದಿಂದ ಠಾಣೆಗೆ ಬಂದು ಹೋಗ್ತಿದ್ದಾರೆ ವ್ಯಕ್ತಿ!

ಕೊಪ್ಪಳ: ಕೊಲೆ, ಸುಲಿಗೆ, ಕಳ್ಳತನ, ಮೋಸ ಇದ್ಯಾವುದನ್ನು ಮಾಡಿಲ್ಲ. ಆದ್ರೂ ಕೂಡ ವ್ಯಕ್ತಿಯೊಬ್ಬರು ಹಲವು ವರ್ಷದಿಂದ ಚಾಚೂ ತಪ್ಪದೆ ಪೊಲೀಸ್‌ ಠಾಣೆಗೆ ಬಂದು ಹೋಗ್ತಿದ್ದಾರೆ.

Advertisements

ಸಿನಿಮಾ ನಟ- ನಟಿಯರಿಗೆ, ರಾಜಕಾರಣಿಗಳಿಗೆ, ಗಾಯಕರಿಗೆ ಅಭಿಮಾನಿಗಳು ಇರೋದು ಕಾಮನ್. ಆದ್ರೆ ಪೊಲೀಸರಿಗೂ ಅಭಿಮಾನಿ ಇದ್ದಾರೆ ಅಂದ್ರೆ ನಿಜಕ್ಕೂ ಅಶ್ಚರ್ಯದ ಸಂಗತಿ. ಹೌದು, ಜಿಲ್ಲೆಯ ಗಂಗಾವತಿಯಲ್ಲಿ ಖಾಜಾ ಎಂಬ ವಿಚಿತ್ರ ವ್ಯಕ್ತಿ ಇದ್ದಾರೆ. ಅವರು ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ಗಂಗಾವತಿ ಪೊಲೀಸ್‌ ಠಾಣೆಗೆ ಬಂದು ಸಿಪಿಐ ಕಚೇರಿ ಮುಂದೆ ಹೋಗಿ ಉದ್ದ ಮಲಗಿಕೊಂಡು ಪ್ರಾರ್ಥನೆ ಮಾಡಿ ಮತ್ತೆ ಹೊರಟು ಹೋಗ್ತಾರೆ. ಹಲವು ವರ್ಷದಿಂದ ಇದೇ ಇವರ ದಿನನಿತ್ಯದ ಕಾಯಕವಾಗಿದೆ.

Advertisements

ಪೊಲೀಸ್‌ ಠಾಣೆ ಮೆಟ್ಟಿಲು ಅಂದ್ರೆ ನಮಗ್ಯಾಕಪ್ಪ ಪೊಲೀಸರ ಸಹವಾಸ ಅಂತಾ ದೂರ ಇರೋರೆ ಹೆಚ್ಚು. ಆದ್ರೆ ಖಾಜಾ ಮಾತ್ರ ಕಳೆದ 5 ವರ್ಷದಿಂದ ಪ್ರತಿನಿತ್ಯ ಪೋಲಿಸ್ ಠಾಣೆಗೆ ಬರುತ್ತಿದ್ದಾರೆ. ಠಾಣೆಯಲ್ಲಿ ಅದೆಷ್ಟೇ ಪೊಲೀಸರು ಇರಲಿ ಯಾರಿಗೂ ಹೆದರದೆ ಅವರ ಮಧ್ಯೆಯೇ ಬಂದು ಖಾಜಾ ತಮ್ಮ ಕೆಲಸ ಮಾಡಿಕೊಂಡು ಸುಮ್ಮನೆ ಹೋಗ್ತಾರೆ.

ಈ ಕುರಿತು ಖಾಜಾ ಅವರನ್ನು ಪೊಲೀಸರು ಹಲವು ಬಾರಿ ವಿಚಾರಿಸಿದಕ್ಕೆ, ನೀವು ಜನರ ರಕ್ಷಣೆ ಮಾಡ್ತೀರಾ. ನಿಮ್ಮ ಹಾಗೂ ನಿಮ್ಮ ಕುಟುಂಬ ಸುರಕ್ಷಿತವಾಗಿರಲಿ ಎಂದು ಹೀಗೆ ಮಾಡುತ್ತೇನೆಂದು ಹೇಳುತ್ತಾರೆ ಅಂತ ಪೊಲೀಸರು ತಿಳಿಸಿದ್ದಾರೆ.

Advertisements

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Exit mobile version