Connect with us

Latest

ಪತ್ನಿ ಸುಳ್ಳು ಕೇಸ್ ದಾಖಲಿಸಿದ್ದಾಳೆಂದು ನೊಂದು ಮೊಬೈಲ್ ಟವರ್ ಏರಿದ ಪತಿ!

Published

on

– ಪೊಲೀಸರ ಮನವೊಲಿಕೆಯ ಬಳಿಕ ಇಳಿದ

ಲಕ್ನೋ: ಮಡದಿಯ ಜೊತೆ ಜಗಳವಾಡಿಕೊಂಡು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ ಮೊರ್ದಾಬಾದ್ ನಲ್ಲಿ ನಡೆದಿದೆ.

ವ್ಯಕ್ತಿಯನ್ನು ತೇಜ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಸಿಂಗ್ ವಿರುದ್ಧ ಆತನ ಪತ್ನಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸಿದ್ದಾಳಂತೆ. ಪೊಲೀಸರು ಕೂಡ ಈತನ ಮಾತನ್ನು ಕೇಳುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಸಿಂಗ್ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ.

ಸಿಂಗ್ ಟವರ್ ಏರುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕೆಳಗಿಳಿಯುವಂತೆ ಪರಿಪರಿಯಾಗಿ ಬೇಡಿಕೊಂಡರು. ಕೊನೆಗೆ ಆತನ ಮನವೊಲಿಸಿ ಕೆಳಗಿಳಿಸುವಲ್ಲಿ ಎಲ್ಲರು ಯಶಸ್ವಿಯಾಗಿದ್ದಾರೆ.

ಟವರ್ ನಿಂದ ಕೆಳಗಿಳಿದ ಬಳಿಕ ಮಾತನಾಡಿದ ಸಿಂಗ್, ನನ್ನ ಪತ್ನಿಯಿಂದ ನನಗೆ ಬೇಸರವಾಗಿದೆ. ಆಕೆ ನನ್ನ ವಿರುದ್ಧ ಸುಳ್ಳು ಕೇಸ್ ಗಳನ್ನು ದಾಖಲಿಸಿದ್ದಾರೆ. ಪೊಲೀಸರು ಕೂಡ ನನ್ನ ಮಾತುಗಳನ್ನು ಕೇಳಲು ತಯಾರಿಲ್ಲ. ಹೀಗಾಗಿ ನಾನು ನಮ್ಮಿಬ್ಬರ ಸಂಬಂಧವನ್ನು ಮುರಿಯುಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾನೆ.

ತೇಜ್ಪಾಲ್ ಹಾಗೂ ಆತನ ಪತ್ನಿ ಇಬ್ಬರೂ ಎರಡನೇಯ ಮದುವೆಯಾಗಿದ್ದಾರೆ. ಮದುವೆಯ ಬಳಿಕ ದಂಪತಿ ಕೆಲವೊಂದು ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ಮಾಡುತ್ತಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *