Connect with us

International

ರಸ್ತೆಯ ಗುಂಡಿಯಲ್ಲಿ ಸ್ನಾನ ಮಾಡಿ ಪ್ರತಿಭಟನೆ!

Published

on

– ವೀಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತರು

ಇಂಡೋನೇಷ್ಯಾ: ಮೂಲಭೂತ ಸಮಸ್ಯೆಗಳ ಬಗ್ಗೆ ಜನ ಪ್ರತಿನಿಧಿಗಳು ಹಾಗೂ ಸರ್ಕಾರ ಗಮನಕ್ಕೆ ತರಲು ಹದ ಗೆಟ್ಟ ರಸ್ತೆಯ ಗುಂಡಿಯಲ್ಲಿ ಸ್ನಾನ ಮಾಡಿ ವಿಶೇಷವಾಗಿ ಪ್ರತಿಭಟಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಅಮಾಕ್ ಓಹಾನ್ ಈ ರೀತಿಯಾದ ಒಂದು ವಿಭಿನ್ನ ಪ್ರತಿಭಟನೆಯನ್ನು ಮಾಡಿದ್ದಾರೆ. ಇವರು ಸಾಮಾಜಿಕ ಹೋರಾಟಗಾರರಾಗಿದ್ದಾರೆ. ರಸ್ತೆ ಸರಿ ಮಾಡುವಂತೆ ಪ್ರತಿಭಟಿಸಿದ್ದಾರೆ. ಈ ಹಿಂದೆ ರಸ್ತೆ ಗುಂಡಿಯಲ್ಲಿ ಮೀನಿಗೆ ಗಾಳ ಹಾಕಿ ಸರ್ಕಾರವನ್ನು ವ್ಯಂಗ್ಯ ಮಾಡಿದ್ದರು.

ಇಂಡೋನೇಷ್ಯಾದ ಪ್ರಾಯ ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಇವುಗಳಲ್ಲಿ ನಿಂತಿದ್ದ ನೀರಿನಲ್ಲಿ ಸ್ನಾನ ಮಾಡುವ ಮೂಲಕವಾಗಿ ಗಮನ ಸೆಳೆದಿದ್ದಾರೆ. ಓಹಾನ್ ಮಾಡಿರುವ ಈ ಪ್ರತಿಭಟನೆ ಮಾಡಿರುವ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಆಡಳಿತ ರಸ್ತೆಗಳನ್ನು ಸರಿಪಡಿಸಿದೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *