Connect with us

Crime

ಸಾಮಾಜಿಕ ಜಾಲತಾಣದಲ್ಲಿ ನಟಿಯ ಪೋಸ್ಟ್‌‌ಗೆ ಅಶ್ಲೀಲ ಕಮೆಂಟ್ -ವ್ಯಕ್ತಿ ಅರೆಸ್ಟ್

Published

on

ಕೋಲ್ಕತ್ತಾ: ಸಾಮಾಜಿಕ ಜಾಲತಾಣದಲ್ಲಿ ಬೆಂಗಾಳಿ ನಟಿಯ ಪೋಸ್ಟ್‌‌ಗೆ ನಿಂದಿಸಿದಲ್ಲದೆ, ಅಶ್ಲೀಲವಾಗಿ ಕಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಅರುನಿಮಾ ಗೋಶ್ ದೂರು ನೀಡಿದ್ದ ನಟಿಯಾಗಿದ್ದು, ಮುಕೇಶ್ ಶಾ ಬಂಧನಕ್ಕೊಳಗಾದ ವ್ಯಕ್ತಿ. ಮುಕೇಶ್ ಶಾ ದಕ್ಷಿಣ ಕೋಲ್ಕತ್ತಾದ ಗರ್ಫಾ ನಿವಾಸಿಯಾಗಿದ್ದು, ಅಶ್ಲೀಲವಾಗಿ ಕಮೆಂಟ್ ಮಾಡಿದ್ದಕ್ಕೆ ಭಾನುವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿ ಮುಕೇಶ್ ಶಾ ಮೇ 30ರಿಂದ ನಟಿ ಅರುನಿಮಾ ಅವರ ಪೋಸ್ಟ್‌‌ಗೆ ನಿಂದಿಸುತ್ತಾ, ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದನು. ಅಲ್ಲದೆ ಮುಕೇಶ್ ಮಯಾಂಕ್ ಹೆಸರಿನಲ್ಲಿ ನಕಲಿ ಖಾತೆ ಕೂಡ ತೆರೆದಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮುಕೇಶ್ ಶಾ ಯಾಕೆ ಈ ರೀತಿ ಮಾಡಿದ್ದಾನೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಮುಕೇಶ್ ಮಾನಸಿಕವಾಗಿ ಸರಿಯಾಗಿ ಇದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟಿ ಅರುನಿಮಾ, ನಾನು ಇಂತಹ ವಿಷಯಗಳನ್ನು ನಿರ್ಲಕ್ಷಿಸುತ್ತೇನೆ. ಆದರೆ ನಾನು ಎಲ್ಲಿ ಹೋದರೂ ಆತ ನನ್ನ ಹಿಂದೆ ಬರುತ್ತಿರುವುದನ್ನು ಗಮನಿಸಿದೆ. ಹಾಗಾಗಿ ಕೋಲ್ಕತ್ತಾ ಪೊಲೀಸರಿಗೆ ಸಂಪರ್ಕಿಸಿ ದೂರು ನೀಡಿದೆ ಎಂದು ಹೇಳಿದ್ದಾರೆ.