Wednesday, 19th June 2019

Recent News

ಮದುವೆಯಾದ ಮರುರಾತ್ರಿ ಲಾಕಪ್‍ನಲ್ಲಿ ಕಾಲ ಕಳೆದ ವರ

ಕೌಲಾಲಂಪುರ್: ಮದುವೆ ಆದ ಕೆಲವೇ ಗಂಟೆಗಳಲ್ಲಿ ವರನೊಬ್ಬ ಲಾಕಪ್‍ನಲ್ಲಿ ಕಂಬಿ ಎಣಿಸಿದ ಘಟನೆ ಮಲೇಷ್ಯಾದಲ್ಲಿ ನಡೆದಿದೆ.

ಮದುವೆಗೆ ಬಂದಿದ್ದ ಅತಿಥಿಯನ್ನ ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಅವರೊಂದಿಗೆ ಜಗಳವಾಡಿದ ಕಾರಣ ಪೊಲೀಸರು ವರನನ್ನೇ ಕರೆದೊಯ್ದಿದ್ದಾರೆ.

ಇಲ್ಲಿನ ಅಲೋರ್ ಸೆಟಾರ್‍ನ ನಾರ್ಥನ್ ಸಿಟಿಯಲ್ಲಿ ಮದುವೆ ನಡೆಯುತ್ತಿತ್ತು. ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲು ಭಾನುವಾರ ಸಂಜೆ ಮದುವೆ ಸಮಾರಂಭ ನಡೆಯುತ್ತಿದ್ದ ಹೋಟೆಲ್‍ಗೆ ಪೊಲೀಸರು ಬಂದಿದ್ದರು. ಆದ್ರೆ 35 ವರ್ಷದ ವರ ಸೇರಿದಂತೆ ಸುಮಾರು 40 ಜನ ಶಂಕಿತನನ್ನು ಪೊಲೀಸರು ಬಂಧಿಸದಂತೆ ತಡೆದಿದ್ದಾರೆ.

ಈ ವೇಳೆ ಜಗಳವಾಗಿದ್ದು, ವರ ನಮ್ಮವರ ಮೇಲೆ ಗ್ಲಾಸ್ ಎಸೆದ. ಇದರಿಂದ ಅಧಿಕಾರಿಯೊಬ್ಬರ ಎಡಗೈಗೆ ಗಾಯವಾಯಿತು ಅಂತ ಸ್ಥಳೀಯ ಪೊಲೀಸ್ ಅಧಿಕಾರಿ ಮೊಹಮ್ಮದ್ ರೋಜಿ ಹೇಳಿದ್ದಾರೆ.

ಇತ್ತ ಇವರೆಲ್ಲಾ ಪೊಲೀಸರೊಂದಿಗೆ ಜಗಳವಾಡ್ತಿದ್ರೆ 38 ವರ್ಷದ ಆರೋಪಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಮರುದಿನ ಪೊಲೀಸ್ ಅಧಿಕಾರಿಗಳು ವರನ ಮನೆಗೆ ಹೋಗಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆಯೂ ಜಗಳ ನಡೆದಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *