Cinema

ಶೂಟಿಂಗ್ ಸೆಟ್‍ನಲ್ಲೇ ನಿರ್ದೇಶಕ ನಾರಾನಿಪುಳ ಶಾನವಾಸ್‍ಗೆ ಹೃದಯಾಘಾತ

Published

on

Share this

ಚೆನ್ನೈ: ಮಲಯಾಳಂನ ‘ಸೂಫಿಯುಂ ಸುಜಾತಯುಂ’ ಚಿತ್ರದ ನಿರ್ದೇಶಕ ನಾರಾನಿಪುಳ ಶಾನವಾಸ್(37) ನಿಧನರಾಗಿದ್ದಾರೆ.

‘ಗಾಂಧಿರಾಜನ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾಗ ಶೂಟಿಂಗ್ ಸೆಟ್ ನಲ್ಲೇ ಶಾನವಾಸ್‍ಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಶಾನವಾಸ್ ಅವರಿಗೆ ಮಾರ್ಗಮಧ್ಯೆ ಎರಡನೇ ಬಾರಿ ಹೃದಯಾಘಾತವಾಯಿತು. ಹೀಗಾಗಿ ಅವರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಬುಧವಾರ ರಾತ್ರಿ 10.20ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಮಳಪುರಂ ಮೂಲದವರಾಗಿರುವ ಶಾನವಾಸನ್ ಅವರು 2015ರಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ‘ಮಲಯಳಂ ನ ಸೂಫಿಯುಂ ಸುಜಾತಯುಂ’ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ಮೊದಲ ಮಲಯಾಳಂ ಚಿತ್ರವೂ ಇದಾಗಿತ್ತು. ಈ ಸಿನಿಮಾದಿಂದ ಸಿನಿಮಾದಿಂದ ಶಾನವಾಸ್ ಅವರಿಗೆ ಸಾಕಷ್ಟು ಜನಮನ್ನಣೆ ಸಿಕ್ಕಿತ್ತು. ಚಿತ್ರದಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ, ಜಯಸೂರ್ಯ, ದೇವ್ ಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಸದ್ಯ ಶಾನವಾಸ್ ಅಕಾಲಿಕ ನಿಧನಕ್ಕೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

 

View this post on Instagram

 

A post shared by Aditi Rao Hydari (@aditiraohydari)

 

Click to comment

Leave a Reply

Your email address will not be published. Required fields are marked *

Advertisement
Advertisement