Thursday, 25th April 2019

Recent News

ಓದಿನಲ್ಲೂ ಸೈ, ಡ್ಯಾನ್ಸ್ ನಲ್ಲೂ ಸೈ- ಕುಬ್ಜತೆ ಮೆಟ್ಟಿ ನಿಂತ ಹಾವೇರಿಯ ಮಾಲತೇಶ್

ಹಾವೇರಿ: ಅಂಗವೈಕಲ್ಯವನ್ನು ಮೆಟ್ಟಿನಿಂತ ಸಾಧಕರ ಬಗ್ಗೆ ನೀವು ಓದಿರಬಹುದು ಅಥವಾ ಕೇಳಿಬಹುದು. ಆದ್ರೆ ಇದೀಗ ಕುಬ್ಜತೆಯಿಂದ ಬಳಲ್ತಿರೋ ಹಾವೇರಿಯ ಹುಡುಗನೊಬ್ಬ ಪದಕದ ಮೇಲೆ ಪದಕ ಗಳಿಸಿದ್ದಾನೆ.

ಜಿಲ್ಲೆಯ ಶಿವಾಜಿನಗರ ನಿವಾಸಿ ಮಾಲತೇಶ್‍ಗೆ ಈಗ 16 ವರ್ಷ ವಯಸ್ಸು. ಆದರೆ, ಕುಬ್ಜತೆಗೆ ಒಳಗಾಗಿರೋ ಈತ ಬೆಳದಿರೋದು ಕೇವಲ ಎರಡೂವರೆ ಅಡಿ ಎತ್ತರ ಮಾತ್ರ. ಹುಟ್ಟಿನಿಂದಲೇ ಮಗ ಕುಬ್ಜನಾಗಿರೋದ್ರಿಂದ ಶಿಕ್ಷಕರೂ ಆಗಿರೋ ತಂದೆ ಶಿವಪ್ಪ ಗಾಣಿಗೇರ ಸಾಕಷ್ಟು ಆಸ್ಪತ್ರೆಗೆ ತೋರಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ. ಯವುದಕ್ಕೂ ಬೇಸರ ಮಾಡಿಕೊಳ್ಳದೆ ಮಗ ಕೇಳಿದ ಎಲ್ಲವನ್ನೂ ಕೊಡಿಸ್ತಿದ್ದಾರೆ.


ಓದಿನಲ್ಲಿ ಕುಶಾಗ್ರಮತಿಯಾಗಿರೋ ಮಾಲತೇಶ್ ಹತ್ತನೇ ತರಗತಿಯಲ್ಲಿ ಫಸ್ಟ್ ಕ್ಲಾಸ್‍ನಲ್ಲಿ ಪಾಸ್ ಆಗಿದ್ದಾನೆ. ಮಾಲತೇಶ್‍ಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಂಬಾ ಆಸಕ್ತಿ. ಶಾಲಾ ದಿನಗಳಿಂದಲೇ ಡ್ಯಾನ್ಸ್ ನಲ್ಲಿ ಎಲ್ಲರ ಗಮನ ಸೆಳೆದಿದ್ದು, ಜಿಲ್ಲೆಯ ವಿವಿಧೆಡೆ ಡ್ಯಾನ್ಸ್ ಕಾರ್ಯಕ್ರಮ ನೀಡಿ ಸನ್ಮಾನಕ್ಕೆ ಪಾತ್ರರಾಗಿದ್ದಾನೆ.

ಕಂಪ್ಯೂಟರ್ ತರಬೇತಿಯನ್ನೂ ಪಡೆದಿರೋ ಮಾಲತೇಶ್, ಮನಸ್ಸಿದ್ದಲ್ಲಿ ಮಾರ್ಗ ಎಂಬ ಮಾತನ್ನ ನಿಜ ಮಾಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *