Connect with us

Food

ಸಿಂಪಲ್ ಆಗಿ ಮಾಡಿ ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್

Published

on

ಹೋಟೆಲ್‍ಗಳಲ್ಲಿ ಚಿಕನ್ ಚಾಪ್ಸ್ ರುಚಿ ನೋಡಿರುತ್ತೇವೆ. ಅದರೆ ಹಳ್ಳಿ ಸ್ಟೈಲ್‍ನಲ್ಲಿ ಚಿಕನ್ ಚಾಪ್ಸ್ ಮಾಡಿದರೆ ಹೇಗಿರುತ್ತೆ ಎಂಬುದನ್ನು ನೀವು ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ. ರುಚಿ ರುಚಿಯಾದ ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
ಇರುಳ್ಳಿ-1 ದೊಡ್ಡ ಗಾತ್ರ
ಪುದೀನಾ ಸ್ವಲ್ಪ
ಕೊತ್ತಂಬರಿ ಸೊಪ್ಪು
ತೆಂಗಿನಕಾಯಿ ತುರಿ- 2 ಟೀ ಸ್ಪೂನ್
ಬೆಳುಳ್ಳಿ-1
ಹಸಿಮೆಣಸಿನ ಕಾಯಿ – 3 ರಿಂದ 4
ಚಕ್ಕೆ, ಲವಂಗ- 3 ರಿಂದ 4
ಶುಂಠಿ-1 ಚಿಕ್ಕ ಗಾತ್ರದ್ದು
ಚಿಕನ್ – ಅರ್ಧ ಕೇಜಿ
ಎಣ್ಣೆ- 1 ಕಪ್
ಕಾಳುಮೆಣಸಿನ ಪುಡಿ – 1 ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ಅರ್ಧ ಕೇಜಿ ಚಿಕನ್‍ಗೆ ಉಪ್ಪು, ಅರಿಶಿಣ ಹಾಕಿ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಇಟ್ಟಿರ ಬೇಕು.
* ಮೊದಲು ಮಿಕ್ಸಿ ಜಾರಿಗೆ ಒಂದು ಬೆಳ್ಳುಳ್ಳಿಯನ್ನು ಬಿಡಿಸಿ ಹಾಕಬೇಕು. ಜೊತೆಯಲ್ಲಿ ಅರ್ಧದಷ್ಟು ಶುಂಠಿ ಹಾಗೂ 3 ರಿಂದ 4 ಚೆಕ್ಕೆ ಹಾಕಬೇಕು. ನಂತರ ಪುದೀನಾ ಕೊತ್ತಂಬರಿ ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು. ಹಾಗೇ ಲವಂಗ, ಕಾಯಿ ತುರಿ 2 ಸ್ಪೂನ್ ಬೇಕಾದರೆ ದನಿಯಾ ಪೌಡರ್ ಹಾಕಿ ಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.

* ನಂತರ ಒಂದು ಪಾತ್ರೆಯಲ್ಲಿ 2 ರಿಂದ 3 ಸ್ಪೂನ್ ಎಣ್ಣೆ ಹಾಕಿ ಸ್ಟವ್ ಮೇಲೆ ಇಟ್ಟು ಎಣ್ಣೆ ಬಿಸಿಯಾಗುವವರೆಗೆ ಕಾಯಬೇಕು.
* ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಫ್ರೈ ಮಾಡಬೇಕು.
* ನಂತರ ಚಿಕನ್ ಹಾಕಿ ಜೊತೆಯಲ್ಲಿಯೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಇಂಗುವವರೆಗೂ ಚಿಕನ್ ಫ್ರೈ ಮಾಡಬೇಕು.
* ಈ ಮೊದಲು ನಾವು ರುಬ್ಬಿ ತಯಾರಿಸಿದ ಮಸಾಲೆಯನ್ನು ಚಿಕನ್‍ಗೆ ಹಾಕಬೇಕು. ನಂತರ ಕಾಳುಮೆಣಸಿನ ಪುಡಿ ಹಾಕಬೇಕು, ಜೊತೆಯಲ್ಲಿ 1 ಗ್ಲಾಸ್ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು.

* 10 ರಿಂದ 15 ನಿಮಿಷಗಳ ಚಿಕನ್ ಮಸಾಲೆಯೊಂದಿಗೆ ಮಿಶ್ರಣವಾಗುವವರೆಗೂ ಫ್ರೈ ಮಾಡಬೇಕು.
ಈಗ ರುಚಿ ರುಚಿಯಾದ ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ಸವಿಯಲು ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *

www.publictv.in