ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು(Mahesh Babu) ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ತಂದೆ ತಾಯಿ ನಿಧನದ ನೋವಿನ ನಂತರ ಕೊಂಚ ಚೇತರಿಸಿಕೊಂಡಿರುವ ಮಹೇಶ್ ಬಾಬು ಪತ್ನಿ ನಮ್ರತಾ (Namratha Shirodkar) ಹೆಸರಿನಲ್ಲಿ ರೆಸ್ಟೋರೆಂಟ್ ಬ್ಯುಸಿನೆಸ್ ಶುರು ಮಾಡಿದ್ದಾರೆ.
ಇತ್ತೀಚೆಗೆ ಅಣ್ಣ, ತಂದೆ ತಾಯಿ ನಿಧನದ ಶಾಕ್ನಲ್ಲಿದ್ದ ಮಹೇಶ್ ಬಾಬು ಕುಟುಂಬ ಕೊಂಚ ಚೇತರಿಸಿಕೊಂಡಿದ್ದಾರೆ. ಮತ್ತೆ ಸಿನಿಮಾ, ಬ್ಯುಸಿನೆಸ್ ಅಂತಾ ಮಹೇಶ್ ಬಾಬು ಬ್ಯುಸಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಮಲ್ಟಿಫ್ಲೆಕ್ಸ್ ಉದ್ಯಮಕ್ಕೆ ಕಾಲಿಟ್ಟ ಮಹೇಶ್ ಪತ್ನಿ ನಮ್ರತಾ ಈಗ ಹೊಸ ರೆಸ್ಟೋರೆಂಟ್ ಬ್ಯುಸಿನೆಸ್ಗೆ ಕೈ ಹಾಕಿದ್ದಾರೆ. ಇದನ್ನೂ ಓದಿ: ರಶ್ಮಿಕಾ ನಂತರ ಟ್ರೋಲಿಗರ ಕಣ್ಣಿಗೆ ಗುರಿಯಾದ್ರು ನಿವೇದಿತಾ ಗೌಡ
ಪತ್ನಿಯ ಹೆಸರಿನಲ್ಲಿ ರೆಸ್ಟೋರೆಂಟ್ ಮಾಡಲು ಮಹೇಶ್ ಬಾಬು ಹೊರಟಿದ್ದಾರೆ. ಈಗ ನಮ್ರತಾ ಶಿರೋಡ್ಕರ್ ಅವರ ರೆಸ್ಟೋರೆಂಟ್ ಅನ್ನು ಏಷ್ಯನ್ ನಮ್ರತಾ ಎಂದು ಹೆಸರಿಸಲಾಗಿದೆ. ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿದೆ. ಇದು ಡಿಸೆಂಬರ್ 8, 2022 ರಂದು ಬೆಳಗ್ಗೆ ಅದ್ಧೂರಿಯಾಗಿ ಚಾಲನೆ ಸಿಗಲಿದೆ ಎನ್ನಲಾಗುತ್ತಿದೆ.