Connect with us

Cinema

ಮಹೇಶ್ ಬಾಬು ಕತ್ತಿನಲ್ಲಿ 1 ರೂ.ನಾಣ್ಯದ ಟ್ಯಾಟು- ಹೊಸ ಚಿತ್ರದ ಫಸ್ಟ್ ಲುಕ್ ಬಿಡುಗಡೆ

Published

on

ಹೈದರಾಬಾದ್: ಲಾಕ್‍ಡೌನ್ ಮಧ್ಯೆಯೇ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಡಿಫರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ಅವತಾರ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಸಿನಿಮಾ ಕೆಲಸಗಳೆಲ್ಲ ಸ್ಥಗಿತಗೊಂಡಿದ್ದು, ಇಡೀ ದೇಶದ ಚಿತ್ರರಂಗವೇ ಸ್ಥಬ್ಧವಾಗಿದೆ. ಇಂತಹ ಸಂದರ್ಭದಲ್ಲಿ ಮಹೇಶ್ ಬಾಬು ಹೊಸ ಸಿನಿಮಾ ಸರ್ಕಾರು ವಾರಿ ಪಾಟದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ರಗಡ್ ಲುಕ್ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಮತ್ತೊಂದು ಶೂರ್ ಶಾಟ್ ಗ್ಯಾರೆಂಟಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಸರ್ಕಾರು ವಾರಿ ಪಾಟ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನ್ನು ಮಹೇಶ್ ಬಾಬು ಟ್ವೀಟ್ ಮಾಡಿದ್ದು, ಚಿತ್ರದಲ್ಲಿ ಮಹೇಶ್ ಬಾಬು ಮುಖ ತೋರಿಸಿಲ್ಲ ಬದಲಿಗೆ ಕತ್ತು ಹಾಗೂ ತಲೆಯ ಹಿಂಭಾಗವನ್ನು ಮಾತ್ರ ತೋರಿಸಲಾಗಿದೆ. ಅಲ್ಲದೆ ಕತ್ತಿನಲ್ಲಿ ಒಂದು ರೂ. ಹಳೆಯ ನಾಣ್ಯದ ಟ್ಯಾಟು ಸಹ ಕಾಣುತ್ತದೆ. ಪೋಸ್ಟರ್ ಚಿತ್ರ ಹಾಕಿ ಬ್ಲಾಕ್‍ಬೂಸ್ಟರ್ ಸ್ಟಾರ್ಟ್ ಫಾರ್ ಅನದರ್ ಹ್ಯಾಟ್ರಿಕ್ ಎಂದು ಬರೆದುಕೊಂಡಿದ್ದಾರೆ.

ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿದ್ದು, ಮಹೇಶ್ ಬಾಬು ಮೂರು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಸದ್ಯ ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದು, ಈ ಹಿನ್ನೆಲೆ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆಯಂತೆ. ಲಾಕ್‍ಡೌನ್ ವೇಳೆ ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಚಿತ್ರೀಕರಣ ಆರಂಭಿಸಲಿದೆ ಎನ್ನಲಾಗಿದೆ.

ಇನ್ನೂ ವಿಶೇಷತೆ ಎಂದರೆ ಸಿನಿಮಾದ ಶೇ.20ರಷ್ಟು ಭಾಗ ಕ್ಯಾಸಿನೋ ಅಡ್ಡಾದಲ್ಲೇ ಶೂಟ್ ಆಗಲಿದೆಯಂತೆ. ಈ ಭಾಗವನ್ನು ಚಿತ್ರೀಕರಿಸಲು ಚಿತ್ರತಂಡ ವಿದೇಶಕ್ಕೆ ತೆರಳಬೇಕಿತ್ತಂತೆ ಆದರೆ ಕೊರೊನಾ ಹಿನ್ನೆಲೆ ವಿದೇಶಕ್ಕೆ ತೆರಳುವಂತಿಲ್ಲ. ಅಲ್ಲದೆ ಕೊರೊನಾ ಹಿನ್ನೆಲೆ ಕ್ಯಾಸಿನೋ ಅಡ್ಡಾದಲ್ಲಿ ಚಿತ್ರೀಕರಿಸುವುದು ಅಪಾಯಕಾರಿ. ಹೀಗಾಗಿ ಚಿತ್ರತಂಡ ರಾಮೋಜಿ ರಾವ್ ಸ್ಟುಡಿಯೋದಲ್ಲಿ ಬೃಹತ್ ಸೆಟ್ ನಿರ್ಮಿಸುತ್ತಿದೆ.

ಭರತ ಅನೇ ನೇನು ಸಿನಿಮಾದಲ್ಲಿ ಜೊತೆಯಾಗಿದ್ದ ಕಿಯಾರಾ ಅಡ್ವಾಣಿ ಮತ್ತೊಮ್ಮೆ ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡಲಿದ್ದಾರಂತೆ. ಚಿತ್ರದಲ್ಲಿ ವಿಲನ್ ಕ್ಯಾಸಿನೋ ಅಡ್ಡಾದ ಮಾಲೀಕನಾಗಿರುತ್ತಾರಂತೆ, ನಾಯಕಿಗೆ ಕ್ಯಾಸಿನೋ ಆಡುವ ಹವ್ಯಾಸವಿರುತ್ತಂತೆ. ಹೀಗಾಗಿ ಕ್ಯಾಸಿನೋ ಸೆಟ್ ತುಂಬಾ ಪ್ರಮುಖ ಪಾತ್ರ ವಹಿಸುತ್ತಂತೆ. ಅಂದಹಾಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಗೀತಾ ಗೋವಿಂದಂ ಸಿನಿಮಾ ನಿರ್ದೇಶಿಸಿದ್ದ ಪರಶುರಾಮ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರಂತೆ. ಈ ಸಂಗತಿ ಸಹ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.