Connect with us

Cricket

ಕುಟುಂಬದೊಂದಿಗೆ ಆಗಮಿಸಿ ಮತಚಲಾಯಿಸಿದ ಧೋನಿ

Published

on

ರಾಂಚಿ: 2019ರ ಐಪಿಎಲ್ ಟೂರ್ನಿಯ ಬ್ಯುಸಿ ಸಮಯದಲ್ಲೂ ಮತದಾನ ಮಾಡಲು ತವರಿಗೆ ಆಗಮಿಸಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ರಾಂಚಿಯ ಜವಾಹರ್ ವಿದ್ಯಾಮಂದಿರದಲ್ಲಿ ಮತಚಲಾಯಿಸಿದರು.

ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಹಲವು ಗಣ್ಯರು ಇಂದು ಮತ ಚಲಾಯಿಸಿದ್ದಾರೆ. ಇದೇ ವೇಳೆ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಕೂಡ ಮತಚಲಾಯಿಸಿದ್ದಾರೆ. ಅಂದಹಾಗೇ ಧೋನಿ ಜವಾಹರ್ ವಿದ್ಯಾಕೇಂದ್ರದಲ್ಲಿಯೇ ಶಿಕ್ಷಣ ಪಡೆದಿದ್ದರು. ಐಪಿಎಲ್ ಟೂರ್ನಿಯ ನಡುವೆಯೂ ಮತ ಚಲಾಯಿಸಿ ಧೋನಿ ಇತರರಿಗೆ ಮಾದರಿಯಾಗಿದ್ದಾರೆ.

ಇತ್ತ ಐಪಿಎಲ್ ಟೂರ್ನಿಯ ಮಂಗಳವಾರ ನಡೆಯಲಿರುವ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವನ್ನು ಮುಂಬೈ ಇಂಡಿಯನ್ಸ್ ತಂಡ ಎದುರಿಸಲಿದೆ. ಇತ್ತ ಇದುವರೆಗೂ ಮುಖಾಮುಖಿ ಆಗಿರುವ ಪಂದ್ಯಗಳಲ್ಲಿ ಮುಂಬೈ ಮೇಲುಗೈ ಸಾಧಿಸಿದ್ದು, ಚೆನ್ನೈನ ತವರು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋಲುಂಡ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಜಯಗಳಿಸಲಿರುವ ತಂಡವನ್ನು ಎದುರಿಸುತ್ತದೆ. ವಿಶಾಖಪಟ್ಟಣದಲ್ಲಿ ಶುಕ್ರವಾರ 2ನೇ ಕ್ವಾಲಿಫೈಯರ್ ಪಂದ್ಯ ಡೆಲ್ಲಿ ಹಾಗೂ ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ.