Karnataka
ಭಕ್ತರಿಗೆ ಆಶೀರ್ವಾದ ಮಾಡುತ್ತೆ ಶ್ವಾನ- ವೀಡಿಯೋ ವೈರಲ್

ಮುಂಬೈ: ದೇವಾಲಯದ ಬಾಗಿಲಿನಲ್ಲಿ ಕುಳಿತ ಶ್ವಾನ ಭಕ್ತರನ್ನು ಆಶೀರ್ವದಿಸುತ್ತಾ ಕೈಕುಲುಕುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಸಿದ್ಧತೆಕ್ನಲ್ಲಿರುವ ಸಿದ್ಧಿವಿನಾಯಕ್ ದೇವಸ್ಥಾನದಲ್ಲಿ ನಾಯಿಯೊಂದು ದೇವಸ್ಥಾನಕ್ಕೆ ಬರುವ ಭಕ್ತರನ್ನು ಆಶೀರ್ವದಿಸುವ ಮತ್ತು ಕೈಕುಲುಕುವ ಒಂದು ವೀಡಿಯೋ ಸಖತ್ ವೈರಲ್ ಆಗಿದೆ. ಈ ವೀಡಿಯೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈಗ ಈ ವೀಡಿಯೋಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ದೇವಸ್ಥಾನದ ಪ್ರವೇಶದ್ವಾರದ ಹೊರಗೆ ಶ್ವಾನವೊಂದು ಕುಳಿತುಕೊಂಡಿದೆ. ದೇವರ ದರ್ಶನ ಪಡೆದು ಹೊರಗೆ ಬರುತ್ತಿರುವ ಭಕ್ತರು ಕೆಲವರು ನಾಯಿಯ ಕಡೆಗೆ ಕೈ ಚಾಚಿ ಕೈಕುಲುಕುತ್ತಿದ್ದಾರೆ. ಪ್ರಾಣಿ ತನ್ನ ಕೈಗಳನ್ನು ಅಲ್ಲಾಡಿಸಿ ಸ್ವಾಗತಿಸುತ್ತಿತ್ತು. ಹಾಗೆ ಇನ್ನೊಂದು ವೀಡಿಯೋದಲ್ಲಿ ಹೊರಗೆ ಕುಳಿತಿದ್ದ ಶ್ವಾನಕ್ಕೆ ಭಕ್ತರು ತಲೆ ಬಾಗಿ ನಮಸ್ಕಾರ ಮಾಡಿದ್ದಾರೆ. ಶ್ವಾನವು ಅವರ ತಲೆ ಮೇಲೆ ಕಾಲಿಟ್ಟು ಆಶೀರ್ವಾದವನ್ನು ಮಾಡಿದೆ.
ಈ ವೀಡಿಯೋವನ್ನು ನೋಡಿದ ನೆಟ್ಟಿಗರು ನಾಯಿ ಕುರಿತಾಗಿ ಪ್ರೀತಿಯ ಮಾತುಗಳಾನ್ನಾಡಿದ್ದಾರೆ. ಎರಡೂ ವೀಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡ ಕೆಲವೇ ಕ್ಷಣದಲ್ಲಿ ವೈರಲ್ ಆಗಿದ್ದು 13 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ.
