Connect with us

Chamarajanagar

ನಾಳೆಯಿಂದ ಮಾದಪ್ಪನ ದರ್ಶನಕ್ಕೆ ಅವಕಾಶ – ಬೆಟ್ಟದಲ್ಲಿ ಭಕ್ತರು ವಾಸ್ತವ್ಯ ಹೂಡುವಂತಿಲ್ಲ

Published

on

Share this

ಚಾಮರಾಜನಗರ: ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಳೆ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ.

ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ತೀರ್ಥಪ್ರಸಾದ, ದಾಸೋಹ, ಯಾವುದೇ ಸೇವೆ, ಉತ್ಸವ, ಮುಡಿ ಕೊಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಾಧಿಕಾರದ ಬಸ್ ಸೇವೆಯೂ ಸದ್ಯಕ್ಕೆ ಇರುವುದಿಲ್ಲ. ಬೇಡಿಕೆಗನುಸಾರ ಬಸ್ ಓಡಿಸುವ ಬಗ್ಗೆ ಪರಿಶೀಲಿಸಲಾಗುವುದು. ಭಕ್ತಾದಿಗಳು ಕಡ್ಡಾಯವಾಗಿ ರಂಗಮಂದಿರಕ್ಕೆ ಬಂದು ಕೋವಿಡ್ ಮಾರ್ಗಸೂಚಿಯಂತೆ ವ್ಯವಸ್ಥೆ ಮಾಡಲಾಗುವ ಆಸನಗಳಲ್ಲಿ ಕುಳಿತುಕೊಂಡು ತಮ್ಮ ಸರದಿ ಬಂದಾಗ ದರ್ಶನ ಪಡೆಯಬೇಕು.

ಯಾವುದೇ ನೂಕು ನುಗ್ಗಲಿಗೆ ಅವಕಾಶ ಇರುವುದಿಲ್ಲ. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಲಾಗುವುದು. ಜೊತೆಗೆ ಬೆಟ್ಟದಲ್ಲಿ ವಾಸ್ತವ್ಯ ಹೂಡಲು ಅವಕಾಶವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ವಂಚನೆ ಮಾಡಿಲ್ಲ, ಕ್ಷಮೆ ಕೇಳದಿದ್ದರೆ, ಕಾನೂನು ಹೋರಾಟದ ಎಚ್ಚರಿಕೆ: ವಿಜಯ್ ನಿರಾಣಿ ಸ್ಪಷ್ಟನೆ

Click to comment

Leave a Reply

Your email address will not be published. Required fields are marked *

Advertisement