Connect with us

ಯೋಗೇಶ್ವರ್ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ: ಕೆ.ಜಿ. ಬೋಪಯ್ಯ

ಯೋಗೇಶ್ವರ್ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ: ಕೆ.ಜಿ. ಬೋಪಯ್ಯ

ಮಡಿಕೇರಿ: ಸಚಿವ ಯೋಗೇಶ್ವರ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ವಿರಾಜ್‍ಪೇಟೆ ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ ಗರಂ ಆಗಿದ್ದಾರೆ.

ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಮಾತನ್ನೆಲ್ಲ ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅಂತವರ ಮಾತಿಗೆಲ್ಲಾ ಯಾವುದೇ ಬೆಲೆ ಇಲ್ಲ ಎಂದು ತಿರುಗೇಟು ನೀಡಿದರು.

ಸಿಎಂ ಯಡಿಯೂರಪ್ಪ ಅವರೇ ಮುಂದೆಯೂ ಸಿಎಂ ಆಗಿ ಮುಂದುವರಿಯುತ್ತಾರೆ. ಸಿಎಂ ಸ್ಥಾನದಿಂದ ಬದಲಾವಣೆಯ ಮಾತೇ ಇಲ್ಲ ಎಂದು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ರಾಷ್ಟ್ರೀಯ ಅಧ್ಯಕ್ಷರು ಅದನ್ನೇ ಹೇಳಿದ್ದಾರೆ.

ರಾಜ್ಯಅಧ್ಯಕ್ಷರಂತು ಅದನ್ನೇ ಹೇಳಿ ಹೇಳಿ ಅವರಿಗೆ ಸಾಕಾಗಿದೆ ಹೋಗಿದೆ. ಹೀಗಿದ್ದರು ಸಿಎಂ ಬದಲಾಗುತ್ತಾರೆ ಎನ್ನೋದು ಸಾಧ್ಯವೇ ಇಲ್ಲ. ಯೋಗೇಶ್ವರ್ ಅವರ ಮಾತು ಯಾರಿಗೂ ಲೆಕ್ಕಕ್ಕಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮತ್ತೆ ಡಿಸಿಗೆ ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ – ಇನ್ಮುಂದೆ ಮಾತಾಡಲ್ಲವೆಂದು ಕದನ ವಿರಾಮ ಘೋಷಣೆ!

ಇತ್ತೀಚಿನ ದಿನಗಳ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ಕೈಬೀಡುವಂತೆ ಬಿಜೆಪಿ ಸಚಿವ ಶಾಸಕರು ಹೇಳತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಆತನ ಬಗ್ಗೆ ಮಾತನಾಡುವಷ್ಟು ಯೋಗೇಶ್ವರ್ ದೊಡ್ಡ ವ್ಯಕ್ತಿ ಅಲ್ಲ ಎಂದು ಶಾಸಕರು ಗರಂ ಆಗಿದ್ದಾರೆ.

Advertisement
Advertisement