Connect with us

Corona

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಸೌಕರ್ಯವಿಲ್ಲ- ಸೋಂಕಿತರ ಅಳಲು

Published

on

ಮಡಿಕೇರಿ: ಕೊರೊನಾ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ ಎಂದು ಕೊರೊನಾ ರೋಗಿಗಳು ಅಳಲು ತೋಡಿಕೊಂಡು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ಸರಿಯಾದ ಸೌಲಭ್ಯವಿಲ್ಲ. ನಾಲ್ಕು ವಾರ್ಡ್‍ಗಳಲ್ಲಿರುವ 20 ರೋಗಿಗಳಿಗೆ ಎರಡೇ ಟಾಯ್ಲೆಟ್‍ಗಳಿವೆ. ಅವುಗಳನ್ನೇ 20 ರೋಗಿಗಳು ಬಳಸುತ್ತಿದ್ದೇವೆ. ರೋಗದಿಂದ ಗುಣಮುಖರಾಗುತ್ತಿರುವವರು ಇವುಗಳನ್ನೇ ಬಳಸಿ ಮತ್ತೆ ರೋಗ ತಂದುಕೊಳ್ಳಬೇಕಾದ ಸ್ಥಿತಿ ಇದೆ. ಎರಡು ಮೂರು ದಿನಗಳಾದರೂ ಸ್ಯಾನಿಟೈಸರ್ ಕೊಡುವುದಿಲ್ಲ ಎಂದು ಆರೋಪ ಮಾಡಿದ್ದಾರೆ.

ಸ್ನೇಹಿತರಿಗೆ ಮನೆಯವರಿಗೆ ಹೇಳಿ ಹೊರಗಿನಿಂದ ನಾವು ಸ್ಯಾನಿಟೈಸರ್ ತರಿಸಿಕೊಳ್ಳುತ್ತಿದ್ದೇವೆ. ಬಿಸಿನೀರು ಕುಡಿಯಲು ಹೇಳುತ್ತಾರೆ. ಆದರೆ ದಿನಕ್ಕೆ ಎರಡು ಬಾರಿ ಮಾತ್ರವೇ ಕುಡಿಯುವುದಕ್ಕೆ ನೀರು ಕೊಡುತ್ತಿದ್ದಾರೆ. ಬೇಕಾದಾಗ ನೀರು ಸಿಗೋದಿಲ್ಲ. ಇಲ್ಲಿರುವುದಕ್ಕಿಂತ ಮನೆಯಲ್ಲಿದ್ದರೆ ಎಷ್ಟೋ ಚೆನ್ನಾಗಿರುತಿತ್ತು, ಆರೋಗ್ಯವಾಗಿರುತ್ತಿದ್ದೆವು ಎಂದು ಕೊರೊನಾ ರೋಗಿಗಳು ವಿಡಿಯೋದಲ್ಲಿ ನೋವನ್ನು ಹೇಳಿಕೊಂಡಿದ್ದಾರೆ.